Home » ಪೊಲೀಸ್ ಮತ್ತು ಅಧಿಕಾರಿಗಳ ಸೋಗಿನಲ್ಲಿ ಆಗಂತಕರು
 

ಪೊಲೀಸ್ ಮತ್ತು ಅಧಿಕಾರಿಗಳ ಸೋಗಿನಲ್ಲಿ ಆಗಂತಕರು

by Kundapur Xpress
Spread the love

ಕೋಟ: ಇಲ್ಲಿನ ಕೋಟ ಠಾಣಾ ವ್ಯಾಪ್ತಿಯ ಮಣೂರಿನ ಉದ್ಯಮಿಯೊಬ್ಬರ ಮನೆಗೆ ಪೊಲೀಸ್ ಹಾಗೂ ಅಧಿಕಾರಿಗಳ ಸೋಗಿನಲ್ಲಿ ಬಂದ ಅಪರಿಚಿತರು ಬಗ್ಗೆ ಸಾಕಷ್ಟು ಅನುಮಾನ ಮಾಡಿದ್ದು, ಆಗಮಿಸಿದವರು ಸರ್ಕಾರಿ ಇಲಾಖೆ ಅಧಿಕಾರಿಗಳು ಅಲ್ಲ..? ಹಾಗಾದ್ರೆ ಆಗಮಿಸಿದ ತಂಡದವರು ಯಾರು..? ಯಾಕಾಗಿ ಬಂದಿದ್ದಾರೆ..? ಯಕ್ಷಪ್ರಶ್ನೆಯಾಗಿ ಆತಂಕ ಸೃಷ್ಟಿಸಿದೆ.

ಈ ಕುರಿತು ಮನೆಯ ಕವಿತಾ ಅವರು ಅವರು ಜುಲೈ 25ರಂದು ಬೆಳಿಗ್ಗೆ 8.30 ಕ್ಕೆ ಮನೆಯ ಹೊರಗಿನಿಂದ ಯಾರೋ ಬಾಗಿಲು ಬಡಿದ ಶಬ್ದವಾಗಿತ್ತು ಆಗ ಅವರು ಪ್ರತಿಕ್ರಿಯಿಸಿಲ್ಲ ,9 ಗಂಟೆ ಸುಮಾರಿಗೆ ಹೊರಗೆ ಬಂದು ನೋಡಿದಾಗ ಯಾರು ಇರಲಿಲ್ಲ ಈ ಕುರಿತು ಮನೆಯ ಸಿಸಿಟಿವಿ ಮೇಲೆ ನಿಗಾ ಇಡುತ್ತಿರುವ ಕುಂದಾಪುರ ಸೈನ್ ಇನ್ ಸೆಕ್ಯೂರಿಟಿ ಸಂಸ್ಥೆಯವರು ಫೋನ್ ಮಾಡಿ ನಿಮ್ಮ ಮನೆಗೆ ಸ್ವಿಫ್ಟ್ ಮತ್ತು ಇನೋವಾ ಕಾರಿನಲ್ಲಿ ಆರರಿಂದ ಎಂಟು ಮಂದಿ ಆಗಮಿಸಿ ಗೇಟು ತೆರೆಯಲು ಯತ್ನಿಸಿದ್ದಾರೆ ಸಾಧ್ಯವಾಗದಿದ್ದಾಗ ಕಾಂಪೌಂಡ್ ಹಾರಿ ಮನೆಗೆ ಬಂದು ಬಾಗಿಲು ಹಾಗೂ ಕಿಟಕಿಯನ್ನು ತೆಗೆಯಲು ಯತ್ನಿಸಿದ್ದಾರೆ ಎಂದು ತಿಳಿಸಿದ್ದಾರೆ

ಅಧಿಕಾರಿಗಳ ಸೋಗಿನಲ್ಲಿ ಕಾರಿನಲ್ಲಿ ಬಂದವರು ಸಫಾರಿ ಧರಿಸಿದ್ದ ಒಬ್ಬ ಹಾಗೂ ಇತರ ನಾಲ್ವರು, ಮತ್ತೊಂದು ಕಾರಿನಲ್ಲಿ ಪೊಲೀಸ್ ಸಮವಸ್ತ್ರದಲ್ಲಿದ್ದರು ಹಾಗೂ ಇತರರು ಸೇರಿ 8 ಮಂದಿ ಇದ್ದರು ಎಂದು ಶಂಕೆ ವ್ಯಕ್ತವಾಗಿದೆ.

ಆರು ಜನ ಇರುವುದು ಸಿಸಿಟಿವಿಯಲ್ಲಿ ಸರಿಯಾಗಿದೆ. ಕಾರಿನಿಂದ ಇಳಿದ ತಂಡ ಗೇಟ್ ತಡೆಯಲು ಯತ್ನಿಸಲು ಸಾಧ್ಯವಾಗದಿದ್ದಾಗ ಗೇಟ್ ಅನ್ನು ಗುದ್ದಿದ್ದಾರೆ. ಆ ಬಳಿಕ ಇನ್ನೊಂದು ಕಡೆಯಿಂದ ಹೋಗಿ ಕಾಂಪೌಂಡ್ ನಿಂದ ಬಾವಿಕಟ್ಟೆಗೆ ಇಳಿದು ಮನೆಯ ಅಂಗಳಕ್ಕೆ ಹೋಗಿ ಅಲ್ಲಿ ಬಾಗಿಲು ತೆರೆಯಲು ಆಗದಿದ್ದಾಗ ತಂಡ ವಾಪಾಸು ತೆರಳಿದೆ ಎಂದು ತಿಳಿಯಲಾಗಿದೆ

ಮನೆಯವರು ಬಾಗಿಲು ತೆರೆಯದ ಕಾರಣ ಈ ತಂಡ ಸಾಸ್ತಾನ ಟೋಲ್ ಮಾರ್ಗದಲ್ಲಿ ಸಾಗದೆ ಬಾರ್ಕೂರು ರಸ್ತೆ ಮೂಲಕ ಟೋಲ್ ತಪ್ಪಿಸಿ ಕೊಂಡು ವಾಹನ ಅತಿ ವೇಗದಲ್ಲಿ ಸಾಗಿವೆ ಎಂದು ತಿಳಿದು ಬಂದಿದೆ. ಕಾರಿನ ನಂಬರ್ ಪ್ಲೇಟ್ ಗಳ ಗುರುತು ಹಚ್ಚಲು ಸಾಧ್ಯವಿಲ್ಲದಂತೆ ತಂಡ ಸಿದ್ಧತೆ ಮಾಡಿಕೊಂಡಿತ್ತು ಎನ್ನಲಾಗಿದೆ.

ಪೊಲೀಸರು ಈ ಪ್ರಕರಣದ ಬಗ್ಗೆ ಪ್ರತ್ಯೇಕ ಎರಡು ತಂಡಗಳ ಮೂಲಕ ತನಿಖೆಯನ್ನು ಚುರುಕುಗೊಳಿಸಿದ್ದಾರೆ

 

ಕೋಟ.ಜು.೨೯. ಕ್ರೈಂ

   

Related Articles

error: Content is protected !!