Home » ಯುವ ಕಲಾವಿದ ಆತ್ಮಹತ್ಯೆಗೆ ಶರಣು
 

ಯುವ ಕಲಾವಿದ ಆತ್ಮಹತ್ಯೆಗೆ ಶರಣು

by Kundapur Xpress
Spread the love

ಉಡುಪಿ : ಯುವ ವಾದ್ಯ ಕಲಾವಿದರೊಬ್ಬರು ಮನೆಯ ಕೊಠಡಿಯಲ್ಲಿ ಮಾಡಿನ ಪಕ್ಕಾಸಿಗೆ ನೇಣುಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಬೈಲಕೆರೆ ವಿದ್ಯೋದಯ ಶಾಲೆಯ ಸನಿಹ  ವರದಿಯಾಗಿದೆ.

ಶಿವಳ್ಳಿ ಗ್ರಾಮದ ಬೈಲಕೆರೆಯ ರಾಮಕೃಷ್ಣದೇವಾಡಿಗರ ಪುತ್ರ, ವಾದ್ಯ ಕಲಾವಿದ ಅಶ್ವಥ್ (32) ಆತ್ಮಹತ್ಯೆ ಮಾಡಿಕೊಂಡವರು. ಅವರು ತನ್ನ ಕೋಣೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಕೂಡಲೇ ನೆರೆಕೆರೆಯವರ ಸಹಾಯದಿಂದ ಅಶ್ವಥ್ ರನ್ನು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅವರನ್ನು ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದರು. ಅಶ್ವಥ್ ಅವರ ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

 

Related Articles

error: Content is protected !!