Home » ಆ್ಯಂಬುಲೆನ್ಸ್ ದುರಸ್ತಿಗೆ ಹಣ ಇಲ್ಲ : ಆತ್ಮಹತ್ಯೆ
 

ಆ್ಯಂಬುಲೆನ್ಸ್ ದುರಸ್ತಿಗೆ ಹಣ ಇಲ್ಲ : ಆತ್ಮಹತ್ಯೆ

by Kundapur Xpress
Spread the love

ಕುಂದಾಪುರ : ಆ್ಯಂಬುಲೆನ್ಸ್ ರಿಪೇರಿಗೆ ಹಣ ಹೊಂದಾಣಿಕೆ ಮಾಡಿಕೊಳ್ಳಲು ಆಗದಿರುವ ಚಿಂತೆಯಿಂದ ಅಂಬುಲೆನ್ಸ್ ಚಾಲಕ ಕೋಟೇಶ್ವರದ ಕೆ.ಎಸ್.ಅಯೂಬ್ (56) ಎಂಬುವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕೆ. ಎಸ್. ಅಯೂಬ್ ಸುಮಾರು ಒಂದು ತಿಂಗಳ ಹಿಂದೆ ಆ್ಯಂಬುಲೆನ್ಸ್ ವಾಹನ ಖರೀದಿ ಮಾಡಿ ಅದರಲ್ಲಿ ದುಡಿಯುತ್ತಿದ್ದರು. ಆ್ಯಂಬುಲೆನ್ಸ್ ಇತ್ತೀಚಿಗೆ ಮಣಿಪಾಲದ ಹತ್ತಿರ ಅಪಘಾತವಾಗಿ ಜಖಂಗೊಂಡಿದ್ದು, ಅಂಬುಲೆನ್ಸ್ ರಿಪೇರಿಗೆ ಹಣ ಹೊಂದಿಸಿಕೊಳ್ಳಲು ಆಗದೆ ಚಿಂತೆಯಲ್ಲಿದ್ದರು.

ಜು. 26ರಂದು ರಾತ್ರಿ ಮನೆಯಲ್ಲಿ ಮಲಗಲು ಅವರ ಕೋಣೆಗೆ ಹೋದವರು ಮರುದಿನ ಬೆಳಿಗ್ಗೆ ಆದರೂ ಕೋಣೆಯಿಂದ ಹೊರ ಬಾರದಿರುವುದರಿಂದ ಸಂಶಯಗೊಂಡು ಕಿಟಿಕಿಯಿಂದ ನೋಡಿದಾಗ ಅಯೂಬ್ ಫ್ಯಾನಿಗೆ ಕುತ್ತಿಗೆಗೆ ನೇಣು ಬಿಗಿದು ಆತ್ಯಹತ್ಯೆ ಮಾಡಿಕೊಂಡಿದ್ದಾರೆ. ಪ್ರಕರಣ ದಾಖಲಾಗಿದೆ

 

Related Articles

error: Content is protected !!