Home » ಆತ್ಮಹತ್ಯೆ ಶಂಕೆ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌ : ವಿವಾಹಿತನೊಂದಿಗೆ ವಿವಾಹಿತೆ ಪರಾರಿ…?
 

ಆತ್ಮಹತ್ಯೆ ಶಂಕೆ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌ : ವಿವಾಹಿತನೊಂದಿಗೆ ವಿವಾಹಿತೆ ಪರಾರಿ…?

by Kundapur Xpress
Spread the love

ಕುಂದಾಪುರ :  ಕುಂದಾಪುರ ನಗರದ ವಿಠಲವಾಡಿಯ ಜೆ ಎಲ್‌ ಬಿ ರಸ್ತೆಯ ನಿವಾಸಿ ಹೀನಾ ಕೌಶರ್ ಆತ್ಮಹತ್ಯೆ ಶಂಕೆ ಪ್ರಕರಣಕ್ಕೆ ದೊಡ್ಡ ತಿರುವು ದೊರೆತಿದ್ದು ಆಕೆ ಯುವಕನೊಂದಿಗೆ ಪರಾರಿಯಾಗಿರುವುದಾಗಿ ಬಲ್ಲ ಮೂಲಗಳಿಂದ ತಿಳಿದುಬಂದಿದೆ.

ಕೋಡಿ ಸಮೀಪ ಸ್ಕೂಟಿ, ಚಪ್ಪಲಿ ಇಟ್ಟು ನದಿಗೆ ಹಾರುವ ನಾಟಕ ಅಡಿ ಮಹಿಳೆ ಯುವಕನೊಂದಿಗೆ ಪರಾರಿಯಾಗಿದ್ದಾಳೆ 

ಕುಂದಾಪುರದ ನಗರದ ಸಂತೆ ಮಾರ್ಕೇಟ್‌ ಬಳಿಯ ಫುಡ್ ಮಾರ್ಕ್ ಹೋಟೆಲಿನಲ್ಲಿ ಕೆಲಸ ಮಾಡಿಕೊಂಡಿರುವ ಸಾಹಿಲ್ (27 ವರ್ಷ) ಜೊತೆ ಎರಡು ಮಕ್ಕಳ ತಾಯಿ ಹೀನಾ ಕೌಶರ್ (33 ವರ್ಷ) ಪರಾರಿಯಾಗಿದ್ದಾಳೆ ಎಂದು ತಿಳಿದುಬಂದಿದೆ.

ಮಹಿಳೆಯ ಪತಿ ವಿದೇಶದಲ್ಲಿದ್ದು ತನ್ನ ಎರಡು ಮಕ್ಕಳು ಮತ್ತು ತಾಯಿಯೊಂದಿಗೆ ಮಹಿಳೆ ವಾಸವಾಗಿದ್ದಳು. ಯುವಕ ಸಾಹಿಲ್ ಕೂಡ ನಾಪತ್ತೆಯಾಗಿರುವ ಬಗ್ಗೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Related Articles

error: Content is protected !!