266
ಉಡುಪಿ : ಕೊಂಕಣ ರೈಲು ಮಾರ್ಗದಲ್ಲಿ ಸಂಚರಿಸುತ್ತಿದ್ದ ನೇತ್ರಾವತಿ ಎಕ್ಸ್ಪ್ ಪ್ರೆಸ್ ರೈಲಿನಲ್ಲಿ ಬುಧವಾರ ರಾತ್ರಿ ಸಂಚರಿಸುತ್ತಿದ್ದ ಪ್ರಯಾಣಿಕರೊಬ್ಬರಿಂದ 4.67 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವಾಗಿದ್ದು ಗುರುವಾರ ರೈಲ್ವೆ ಪೊಲೀಸರು ಆರೋಪಿಯನ್ನು ಬಂಧಿಸಿ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ ಆರೋಪಿ ದೆಹಲಿ ಮೂಲದ ಸನ್ನಿ ಮಲೋತ್ರ ಎಂದು ಗುರುತಿಸಲಾಗಿದೆ ಈತ ಉಡುಪಿಯ ರೈಲ್ವೆ ನಿಲ್ದಾಣದಲ್ಲಿ ಯಾವುದೇ ಟಿಕೇಟ್ ಪಡೆಯದೆ ಸಂಶಯಾಸ್ಪದವಾಗಿ ಕುಳಿತಿದ್ದ ಎನ್ನಲಾಗಿದ್ದು ವಿಚಾರಿಸಿದಾಗ ಚಿನ್ನಾಭರಣ ಪ್ರಕರಣ ಬೆಳಕಿಗೆ ಬಂದಿದೆ

