232
ಕಾರ್ಕಳ : ಮಹಿಳೆಯ ಕುತ್ತಿಗೆಯಿಂದ ಚಿನ್ನದ ಚೈನನ್ನು ಎಳೆದುಕೊಂಡು ಹೋದ ಘಟನೆ ತಾಲೂಕಿನ ಬೋಳದಲ್ಲಿ ಗ್ರಾಮದಲ್ಲಿ ಸಂಭವಿಸಿದೆ.
ಬೋಳದ ನಿವಾಸಿ ವಸಂತಿ ಎಂಬವರು ಬೆಳಿಗ್ಗೆ ಬೋಳ ಗ್ರಾಮದ ಸುಂಕಮಾರು-ಮಂಜರಪಲ್ಕೆ ಸಾರ್ವಜನಿಕ ರಸ್ತೆಯಲ್ಲಿ ತಮ್ಮ ಮನೆ ಕಡೆಗೆ ನಡೆದುಕೊಂಡು ಹೋಗುತ್ತಿರುವಾಗ ಬೈಕ್‌ನಲ್ಲಿ ಬಂದ ಅಪರಿಚಿತ ಸವಾರ ಮತ್ತು ಹಿಂಬದಿ ಸವಾರ ಬೈಕ್ ನಿಲ್ಲಿಸಿ ವಸಂತಿಯವರನ್ನು ತಡೆದು ಭಾಸ್ಕರವರ ಮನೆ ಎಲ್ಲಿ ಬರುತ್ತೆ ಎಂದು ಕೇಳಿದ್ದು, ಅದಕ್ಕೆ ವಸಂತಿಯವರು ಇಲ್ಲಿ ಭಾಸ್ಕರ ಎನ್ನುವವರು ಯಾರೂ ಇರುವುದಿಲ್ಲ ಎಂದು ಹೇಳಿದಾಗ ಬೈಕ್‌ನ ಹಿಂದೆ ಕುಳಿತಿದ್ದ ಮಹಿಳೆ ವಸಂತಿಯವರ ಕುತ್ತಿಗೆಗೆ ಕೈ ಹಾಕಿ ಕುತ್ತಿಗೆಯಲ್ಲಿದ್ದ 32 ಗ್ರಾಂ ತೂಕದ ಚಿನ್ನದ ಚೈನ್‌ನ್ನು ಎಳೆದುಕೊಂಡು ಪರಾರಿಯಾಗಿದ್ದಾರೆ ವಸಂತಿ ಅವರು ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಈ ಹಿಂದೆಯೂ ಕೂಡ ಕಾರ್ಕಳದಲ್ಲಿ ಇದೇ ರೀತಿಯ ಹಲವು ಘಟನೆಗಳು ನೆಡೆದಿದೆ

