Home » ಮೀನು ಲಾರಿಯಲ್ಲಿಟ್ಟಿದ್ದ 4.25.000 ಕಳವು
 

ಮೀನು ಲಾರಿಯಲ್ಲಿಟ್ಟಿದ್ದ 4.25.000 ಕಳವು

by Kundapur Xpress
Spread the love

ಕುಂದಾಪುರ : ಕಾಪು ಬಳಿಯ ಕಟಪಾಡಿಯಲ್ಲಿ ಮೀನಿನ ಲಾರಿಯನ್ನು ನಿಲ್ಲಿಸಿದ್ದ ವೇಳೆ ಲಾರಿಯಲ್ಲಿದ್ದ 4,25,000 ರೂಪಾಯಿ ಹಣವನ್ನು ಕಂಡಕ್ಟರ್‌ ಕದ್ದು ಪರಾರಿಯಾದ ಘಟನೆ ನಡೆದಿದೆ

ಕುಂದಾಪುರದ ಎಂ ಕೋಡಿಯ ನಿವಾಸಿಯಾದ ಆಸ್ಮಾ ಎಂಬವರು ನೀಡಿದ ದೂರಿನಂತೆ ನಾನು KA20 D7988 ನೇ ನಂಬ್ರದ ಇನ್ಸೊಲೇಟರ್‌ ಮೀನಿನ ವಾಹನದ ಮಾಲಿಕರಾಗಿದ್ದು ವಾಹನಕ್ಕೆ ಚಾಲಕರಾಗಿ ಅಬ್ದುಲ್‌ ಸತ್ತರ್‌ ಹಾಗೂ ಕಂಡಕ್ಟರ್‌ ಆಗಿ ಮಹಮ್ಮದ್‌ ಅದ್ನಾನ್‌ ಹಾಗೂ ಆತನ ಸ್ನೇಹಿತ ನಿಶಾದ್‌ ರವರನ್ನು ನೇಮಿಸಿರುತ್ತೇನೆ. ದಿನಾಂಕ. 10-11-2024 ರಂದು ಬೆಳಿಗ್ಗೆ 04.00 ಗಂಟೆಗೆ ಮೀನಿನ ವಾಹನವನ್ನು ಕಾಪುವಿನ ಕಟಪಾಡಿಯಲ್ಲಿ ನಿಲ್ಲಿಸಿ ಚಾಲಕ ಅಬ್ದುಲ್‌ ಸತ್ತಾರ್‌ ರವರು ನಿದ್ರೆಗೆ ಜಾರಿದ್ದು ಬೆಳಿಗ್ಗೆ 06.00 ಗಂಟೆಗೆ ಎಚ್ಚರವಾದಾಗ ವಾಹದಲ್ಲಿ ಕಂಡಕ್ಟರ್ ಮಹಮ್ಮದ್‌ ಅದ್ನಾನ್ ಮತ್ತು ನಿಶಾದ್‌ ರವರು ಇಲ್ಲದೇ ಇದ್ದು ವಾಹನದಲ್ಲಿ ನೋಡುವಾಗ ವಾಹನದಲ್ಲಿ ಇಟ್ಟಿದ್ದ ರೂ 4,25,000/- ನಗದು ಹಣವನ್ನು ಕದ್ದುಕೊಂಡು ಹೋಗಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿರುತ್ತಾರೆ

ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

 

Related Articles

error: Content is protected !!