Home » ಅಂತರ್ ಜಿಲ್ಲಾ ಕಳ್ಳನ ಬಂಧನ
 

ಅಂತರ್ ಜಿಲ್ಲಾ ಕಳ್ಳನ ಬಂಧನ

9 ಲಕ್ಷ ಮೌಲ್ಯದ ಸೊತ್ತು ವಶಕ್ಕೆ

by Kundapur Xpress
Spread the love

ಉಡುಪಿ: ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಮನೆ ಕಳ್ಳತನ ಮಾಡಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ದೋಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ನಗರ ಠಾಣಾ ಪೊಲೀಸರು ಅಂತರ್ ಜಿಲ್ಲಾ ಮನೆಗಳ್ಳ ಆರೋಪಿಯಯಾದ ಮಲ್ಲಾರು ಗ್ರಾಮದ ತೌಸೀಫ್ ಅಹಮದ್(34) ಎಂಬಾತನನ್ನು ಕಾಪುವಿನ ಮಲ್ಲಾರಿನಲ್ಲಿ ಬಂಧಿಸಿದ್ದಾರೆ ಈತನಿಂದ ಕಳವು ಮಾಡಿದ್ದ ಒಟ್ಟು 9,00,500 ರೂ. ಮೌಲ್ಯದ 155 ಗ್ರಾಂ ತೂಕದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

76-ಬಡಗುಬೆಟ್ಟು ಗ್ರಾಮ ಶ್ರೀಮತಿ ಎಂಬವರ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಮನೆಗೆ ಜೂ.30ರಂದು ನುಗ್ಗಿದ ಕಳ್ಳರು ಒಟ್ಟು 188 ಗ್ರಾಂ ತೂಕದ ಚಿನ್ನಾಭರಣ ಹಾಗೂ 15,500ರೂ. ನಗದು ಕಳವು ಮಾಡಿದ್ದರು. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಉಡುಪಿ ನಗರ ಠಾಣಾ ಪೊಲೀಸ್ ನಿರೀಕ್ಷಕ ಮಂಜಪ್ಪಡಿ.ಆರ್., ಎಸ್ಸೈಗಳಾದ ಈರಣ್ಣ ಶಿರಗುಂಪಿ, ಭರತೇಶ್ ಕಂಕಣವಾಡಿ, ಪುನೀತ್ ಕುಮಾರ್ ಮತ್ತು ಸಿಬ್ಬಂದಿ ಸತೀಶ್ ಬೆಳ್ಳೆ, ಚೇತನ್, ಆನಂದ, ಎಸ್.ಶಿವಕುಮಾರ್, ರಿಯಾಝ್ ಅಹಮದ್, ವಿಶ್ವನಾಥ ಶೆಟ್ಟಿ, ಕಿರಣ್, ಹೇಮಂತ್ ಕುಮಾರ್, ಓಬಳೇಶ್, ರಾಜೇಂದ್ರರವರನ್ನೊಳಗೊಂಡ ತಂಡವು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ

ಬಂಧಿತ ಆರೋಪಿ ವಿರುದ್ಧ ಈಗಾಗಲೇ ಬಂಟ್ವಾಳ, ಪಣಂಬೂರು, ಬಜಪೆಯಲ್ಲಿ ಹಗಲು ಮನೆಗಳ್ಳತನ ಪ್ರಕರಣಗಳು ದಾಖಲಾಗಿವೆ.

   

Related Articles

error: Content is protected !!