ಕುಂದಾಪುರ:ಕುಂದಾಪುರ ನಗರ ಠಾಣಿಯಲ್ಲಿ ಮೊಬೈಲ್ ಕಳೆದು ಹೋಗಿರುವ ಬಗ್ಗೆ ಪ್ರತಿನಿತ್ಯವೂ ಸಾರ್ವಜನಿಕರಿಂದ ಹಲವಾರು ದೂರುಗಳು ಬರುತ್ತಿದ್ದು ಈ ನಿಟ್ಟಿನಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಗೊಂಡು ಕೆಲವು ಪ್ರಕರಣಗಳನ್ನು ತಕ್ಷಣವೇ ಭೇಧಿಸಿದ ಬಗ್ಗೆ ಕುಂದಾಪುರ P S I ಪ್ರಸಾದ್ ಕುಮಾರ್ ಕೆ ಹಾಗೂ ಸಿಬ್ಬಂದಿಯವರ ಬಗ್ಗೆ ಸಾರ್ವಜನಿಕರಿಂದ ಬಹಳ ಮೆಚ್ಚುಗೆ ವ್ಯಕ್ತವಾಗಿದೆ
ಈಗಾಗಲೇ ಮೊಬೈಲ್ ಕಳೆದುಹೋದ ಬಗ್ಗೆ ಕುಂದಾಪುರ ಠಾಣೆಯಲ್ಲಿ 27 ಪ್ರಕರಣಗಳು ದಾಖಲಾಗಿದ್ದು ಕಳೆದ ಎರಡೇ ದಿನಗಳಲ್ಲಿ ಕಳೆದುಹೋದ 3 ಮೊಬೈಲ್ ಗಳನ್ನು
CEIR PORTAL ಸಹಾಯದಿಂದ ಪತ್ತೆ ಹಚ್ಚಿ ಅದನ್ನು ವಾರೀಸುದಾರರಿಗೆ ನೀಡಿದ ಬಗ್ಗೆ ಹರ್ಷ ವ್ಯಕ್ತವಾಗಿದೆ
ಸಾರ್ವಜನಿಕರು ತಮ್ಮ ಮೊಬೈಲ್ ಕಳೆದುಹೋದಲ್ಲಿ ತಕ್ಷಣ ಠಾಣೆಗೆ ತಿಳಿಸಿದರೆ ಮೊಬೈಲ್ ಗೆ ಸಂಬಂದಿಸಿದ ಮಾಹಿತಿಯನ್ನು CEIR PORTAL ನಲ್ಲಿ ದಾಖಲಿಸಲಾಗುವುದು ಎಂದು P S I ಪ್ರಸಾದ್ ಕುಮಾರ್ ಕೆ ತಿಳಿಸಿದ್ದಾರೆ