170
ಕುಂದಾಪುರ : ಕಾರಿನ ಶೋರೂಮ್‌ನಲ್ಲಿ ಕಳವಿಗೆ ವಿಫಲ ಯತ್ನ ನಡೆಸಿದ ಘಟನೆ ಬೀಜಾಡಿ ಎಂಬಲ್ಲಿ ನಡೆದಿದೆ. ಕುಂದಾಪುರ ತಾಲೂಕು ಬೀಜಾಡಿ ಗ್ರಾಮದ ಸಾಯಿ ಡೀಮ್ ಕಾರ್ ಶೋರೂಮ್ನ ಮಾಲೀಕ ಹಾಗೂ ಪಾಲುದಾರ ಮಂಗಳವಾರ ರಾತ್ರಿ ಕೆಲಸ ಮುಗಿಸಿ ಶೋರೂಮ್ ಗೆ ಬೀಗ ಹಾಕಿ ಮನೆಗೆ ತೆರಳಿದ್ದರು.
ಬುಧವಾರ ಬೆಳಗಿನ ಜಾವ ಸುಮಾರು 2.00 ಗಂಟೆಗೆ ಶೋರೂಮ್ನನ ಪಾಲುದಾರ ನಾಗೇಂದ್ರ ಅವರು ತನ್ನ ಮೊಬೈಲ್‌ನಲ್ಲಿ ಸಿಸಿ ಕ್ಯಾಮೆರಾದ ಚಟುವಟಿಕೆ ಪರಿಶೀಲಿಸಿದಾಗ ಶೋರೂಮ್ ಬಳಿ ಯಾರೋ ಅನುಮಾನಸ್ಪದವಾಗಿ ತಿರುಗಾಡುತ್ತಿರುವುದು ಕಂಡು ಬಂದಿದೆ. ಸುದ್ದಿ ತಿಳಿದಾಕ್ಷಣ ಶೋರೂಮ್ ಬಳಿ ಬಂದಾಗ ಇಶಾನ್ ಮತ್ತು ಯಾಹಿನ್ ಕುಂಭಾಸಿ ಇವರು ಕಬ್ಬಿಣದ ರಾಡ್ ಮತ್ತು ಸುತ್ತಿಗೆಯಿಂದ ಶೋರೂಮ್‌ನ ಬೀಗವನ್ನು ಒಡೆಯುತ್ತಿರುವುದು ಕಂಡು ಬಂದಿದೆ. ಕಳ್ಳತನ ಮಾಡುವ ಉದ್ದೇಶದಿಂದ ಶೋರೂಮ್ ಶಟರ್‌ಗೆ ಅಳವಡಿಸಿದ ಬೀಗವನ್ನು ಜಖಂಗೊಳಿಸಿ ಕಳ್ಳತನಕ್ಕೆ ಪ್ರಯತ್ನಿಸಿದ್ದಾರೆ ಎಂದು ಶೋರೂಮ್ ಮಾಲೀಕ ನಿತಿನ್ ಕುಂದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

