ಉಡುಪಿ : ಉಡುಪಿ ನಗರದಲ್ಲಿ ಬಾಡಿಗೆ ಮಾಡುವ ವಿಚಾರದಲ್ಲಿ ಗಲಾಟೆ ನಡೆದು; ಕೆಲವು ಚಾಲಕರು ಸೇರಿ ಓರ್ವ ಚಾಲಕನಿಗೆ ಗಂಭೀರ ಹಲ್ಲೆ ನಡೆಸಿದ್ದಾರೆ. ಪ್ರಸಾದ್ ಹಲ್ಲೆಗೊಳಗಾದ ಚಾಲಕ.
ನಗರದ ಬಿಗ್ ಬಝಾರ್ ಸಮೀಪದ ಪಾರ್ಕಿಂಗನಲ್ಲಿ ಹಲ್ಲೆ ನಡೆದಿದ್ದು, ಪ್ರಸಾದ್ ಗಾಯಗೊಂಡಿದ್ದಾರೆ. ರಾಘು ಮತ್ತು ಸಹಚರರು ಹಲ್ಲೆ ನಡೆಸಿದ್ದಾಗಿ ಸಹೋದ್ಯೋಗಿ ಆರೋಪಿಸಿದ್ದಾರೆ. ಬಳಿಕ ಅಜ್ಜರಕಾಡು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಪ್ರಸಾದ್ ದಾಖಲಾಗಿದ್ದು ಹತ್ತಾರು ಚಾಲಕರು ಆಸ್ಪತ್ರೆ ಬಳಿ ನೆರೆದು ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ.
ಘಟನೆ ಸಂಬಂಧ ಪೊಲೀಸರಿಗೆ ಮಾಹಿತಿ ನೀಡಿದ್ದೇವೆ. ನಗರದೊಳಗೆ ಐದು ಯೂನಿಯನ್ಗಳಿವೆ. ಕೆಲವರು ನಗರದೊಳಗೆ ಬಾಡಿಗೆ ಮಾಡಲು ಬಿಡುತ್ತಿಲ್ಲ. ಈ ಹಿಂದೆ ಕೂಡ ಹಲ್ಲೆ ನಡೆದಿದೆ. ನಾವೆಲ್ಲಿಗೆ ಹೋಗಬೇಕು ? ನಗರಸಭೆ ವ್ಯಾಪ್ತಿಯಲ್ಲಿ ಎಲ್ಲಿ ಬೇಕಿದ್ದರೂ ಬಾಡಿಗೆ ಮಾಡಬಹುದು ಎಂದು ಪೊಲೀಸ್ ಇಲಾಖೆ ನಗರಸಭೆ ಈಗಾಗಲೇ ಅನುಮತಿ ಕೊಟ್ಟಿದೆ. ಆದರೂ ನಮ್ಮ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ ಎಂದು ಆಟೋ ಚಾಲಕರು ಅಳಲು ತೋಡಿಕೊಂಡು, ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ.

