ಕುಂದಾಪುರ : ಬಸ್ರೂರಿನ ಶ್ರೀ ಶಾರದಾ ಕಾಲೇಜಿನಲ್ಲಿ ಕನ್ನಡ ಸಂಘ ಮತ್ತು ಲಲಿತಕಲಾ ಸಂಘದ ಆಶ್ರಯದಲ್ಲಿ ಉಡುಪಿ ಜಿಲ್ಲಾ ಮಟ್ಟದ ಪದವಿ ಪೂರ್ವ ಅಂತರ್ ಕಾಲೇಜು ಕನ್ನಡ ದೇಶಭಕ್ತಿಗೀತೆ ಸಾಮೂಹÀ ಗಾಯನ ಸ್ಪರ್ಧೆ ಕಾಲೇಜಿನ ವೀರರಾಜೇಂದ್ರ ಹೆಗ್ಡೆ ಸಭಾಭವನದಲ್ಲಿ ಜರುಗಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನಿವೃತ್ತ ಪ್ರ್ರಾಧ್ಯಾಪಕರಾದ ಡಾ. ಸಂಪೂರ್ಣಾನಂದ ಬಳ್ಕೂರುರವರು ಕನ್ನಡ ಭಾಷೆ ತನ್ನದೇ ಆದ ಭವ್ಯ ಇತಿಹಾಸ ಪರಂಪರೆಯನ್ನು ಹೊಂದಿದ್ದು, ಮನುಷ್ಯ ಮನುಷ್ಯರ ನಡುವೆ ಭಾವನೆಗಳನ್ನು ಹಂಚಿಕೊಳ್ಳಲು ಸಹಾಯಕವಾಗಿದೆ ಮತ್ತು ಭಾಷೆಗಳು ಸಮಯದೊಂದಿಗೆ ಬದಲಾಗುತ್ತದೆ ಭಾಷೆ ಮಾತನಾಡುವವರ ಪೀಳಿಗೆಯಿಂದ ವಿಕಸನಗೊಳ್ಳುತ್ತದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಚಂದ್ರಾವತಿ ಶೆಟ್ಟಿಯವರು ವಹಿಸಿದ್ದರು. ಸಾಂಸ್ಕøತಿಕ ಸಂಘದÀ ಸಂಯೋಜಕರಾದ ಮಮತಾ ಪ್ರಾಸ್ತಾವಿಕದೊಂದಿಗೆ ಸ್ವಾಗತಿಸಿದರು. ತೀರ್ಪುಗಾರರಾಗಿ ಬಿ. ರಾಜೇಂದ್ರ ಕುಮಾರ್, ಮೀನಾ ಕಾರಂತ್, ಕುಮಾರಿ ಪೂಜಾ ಬಳ್ಕೂರು ತಮ್ಮ ಕರ್ತವ್ಯ ನಿರ್ವಹಿಸಿದರು. ಅಂತರ್ ಕಾಲೇಜು ಕನ್ನಡ ದೇಶಭsÀಕ್ತಿಗೀತೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜು, ದ್ವಿತೀಯ ಸ್ಥಾನ ಸರಕಾರಿ ಪದವಿ ಪೂರ್ವ ಕಾಲೇಜು, ಕುಂದಾಪುರ ಹಾಗೂ ತೃತೀಯ ಸ್ಥಾನವನ್ನು ತೌಹೀದ್ ಪದವಿ ಪೂರ್ವ ಕಾಲೇಜು ಗಂಗೊಳ್ಳಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ಇತಿಹಾಸ ವಿಭಾಗದ ಮುಖ್ಯಸ್ಥರಾದ ರಾಘವೇಂದ್ರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿರು. ಉಪನ್ಯಾಸಕಿ ಅನಿತಾ ಧನ್ಯವಾದಗೈದರು.

