ಕುಂದಾಪುರ : ಇಲ್ಲಿನ ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಗಣಕ ವಿಜ್ಞಾನ ವಿಭಾಗದ ಆಶ್ರಯದಲ್ಲಿ ನಡೆದ ಅಂತರ್ ತರಗತಿ ಐಟಿ ಫೆಸ್ಟ್ ‘ಟೆಕ್ ಮಂಥನ್’ ಅನ್ನು ಶ್ರೀ ಸಿದ್ಧಿವಿನಾಯಕ ವಸತಿ ಶಾಲೆ ಹಟ್ಟಿಯಂಗಡಿಯ ಪ್ರಾಂಶುಪಾಲರಾದ ಶ್ರೀ ಶರಣ್ ಕುಮಾರ್ ಉದ್ಘಾಟಿಸಿ, ಆಧುನಿಕ ತಂತ್ರಜ್ಞಾನ ಯುಗದಲ್ಲಿ ನವೀನ ಕೌಶಲ್ಯಗಳನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು. ಜೊತೆಗೆ ಗುರು-ಹಿರಿಯರ ಕುರಿತು ಗೌರವಗಳನ್ನು ಇಟ್ಟುಕೊಳ್ಳಬೇಕಾದುದು ವರ್ತಮಾನದ ತುರ್ತು ಎಂದರು.
ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಆರ್.ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನ ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥ ಶ್ರೀ ಸಂದೀಪ್ ಪೂಜಾರಿ ಮುಖ್ಯ ಅತಿಥಿ ನೆಲೆಯ ಮಾತುಗಳನ್ನಾಡಿದರು. ಉಪಪ್ರಾಂಶುಪಾಲರಾದ ಶ್ರೀ ಚೇತನ್ ಶೆಟ್ಟಿ ಕೋವಾಡಿ ಶುಭಹಾರೈಸಿದರು. ಗಣಕ ವಿಭಾಗದ ಮುಖ್ಯಸ್ಥರಾದ ಶ್ರೀ ಮಹೇಶ್ ಕುಮಾರ್ ಪ್ರಾಸ್ತಾವಿಸಿದರು. ಕಾರ್ಯಕ್ರಮದ ಸಂಯೋಜಕರಾದ ಶ್ರೀ ಹರೀಶ್ ಕಾಂಚನ್, ವಿದ್ಯಾರ್ಥಿ ಪ್ರತಿನಿಧಿ ಶ್ರೀರಾಮ್ ನಾಯಕ್ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಸ್ವಾತಿ ಸ್ವಾಗತಿಸಿ, ಮಹಿಮಾ ವಂದಿಸಿ, ತನ್ವಿ ನಿರೂಪಿಸಿದರು.