ಕುಂದಾಪುರ : ನಿಷ್ಠಾವಂತ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಮಧುಕರ್ ಶೆಟ್ಟಿಯವರು ವೃತ್ತಿ ಬದುಕಿನಲ್ಲಿ ಶ್ರದ್ಧೆ, ಶಿಸ್ತು ಮತ್ತು ಬದ್ಧತೆಗೆ ದರ್ಪಣದಂತಿದ್ದರು. ಅವರ ಸರಳ ಬದುಕು, ಪ್ರಾಮಾಣಿಕತೆ ಮತ್ತು ಸೇವಾ ಮನೋಭಾವವನ್ನು ಈ ಸಮಾಜ ಎಂದೂ ಮರೆಯಲು ಸಾಧ್ಯವಿಲ್ಲ. ಮಧುಕರ್ ಶೆಟ್ಟಿಯವರ ವ್ಯಕ್ತಿತ್ವ ಯುವಜನತೆಗೆ ಮಾದರಿ ಎಂದು ಜನಸೇವಾ ಟ್ರಸ್ಟ್, ಮೂಡುಗಿಳಿಯಾರು ಇದರ ಸಂಚಾಲಕರಾದ ಶ್ರೀ ವಸಂತ್ ಗಿಳಿಯಾರ್ ಹೇಳಿದರು.
ಅವರು ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು, ಕುಂದಾಪುರ ಇಲ್ಲಿನ ರಾಷ್ಟಿçÃಯ ಸೇವಾ ಯೋಜನಾ ಘಟಕದ ಆಶ್ರಯದಲ್ಲಿ ಯಡಾಡಿ-ಮತ್ಯಾಡಿಯಲ್ಲಿ ನಡೆದ ವಾರ್ಷಿಕ ವಿಶೇಷ ಶಿಬಿರದ ಶೈಕ್ಷಣಿಕ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ, ಮಾತನಾಡಿದರು.
ಎಕ್ಸಲೆಂಟ್ ಪದವಿಪೂರ್ವ ಕಾಲೇಜು, ಸುಣ್ಣಾರಿ ಇಲ್ಲಿನ ಪ್ರಾಂಶುಪಾಲರಾದ ಶ್ರೀ ನಾಗರಾಜ್ ಶೆಟ್ಟಿ, ಶಿರಿಯಾರದ ಉದ್ಯಮಿ ಶ್ರೀ ಅಭಿನಂದನ್ ಶೆಟ್ಟಿ, ಶಿವಶಾಂತಿ ಲಯನ್ಸ್ ಕ್ಲಬ್, ಮೊಳಹಳ್ಳಿ ಇದರ ಕಾರ್ಯದರ್ಶಿ ಶ್ರೀ ಮೋಹನದಾಸ್ ಶೆಟ್ಟಿ, ಹೊಂಬಾಡಿ-ಮAಡಾಡಿ ಗ್ರಾಮ ಪಂಚಾಯತ್ ಸದಸ್ಯ ಶ್ರೀ ಸಚಿನ್ ಶೆಟ್ಟಿ ಜಪ್ತಿ, ಸ.ಹಿ.ಪ್ರಾ. ಶಾಲೆ, ಯಡಾಡಿ-ಮತ್ಯಾಡಿಯ ಎಸ್.ಡಿ.ಎಂ.ಸಿ. ಮಾಜಿ ಅಧ್ಯಕ್ಷರಾದ ಶ್ರೀರಾಮ್ ಕುಮಾರ್ ಗುಡ್ಡೆಯಂಗಡಿ, ಸ.ಹಿ.ಪ್ರಾ. ಶಾಲೆ, ಯಡಾಡಿ-ಮತ್ಯಾಡಿಯ ಎಸ್.ಡಿ.ಎಂ.ಸಿ. ಸದಸ್ಯರಾದ ಶ್ರೀಮತಿ ಯಶೋಧ ಮತ್ತು ಶ್ರೀಮತಿ ಪಾರ್ವತಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶ್ರೀ ರಮೇಶ್ ಪೂಜಾರಿ, ಶಿಬಿರಾಧಿಕಾರಿಗಳಾದ ಶ್ರೀ ರಾಜೇಶ್ ಶೆಟ್ಟಿ ವಕ್ವಾಡಿ ಮತ್ತು ಪೂಜಾ ಕುಂದರ್ ಉಪಸ್ಥಿತರಿದ್ದರು.
ಎನ್.ಎಸ್.ಎಸ್. ಸ್ವಯಂಸೇವಕಿ ಜ್ಯೋತಿ ಕಾರ್ಯಕ್ರಮವನ್ನು ನಿರೂಪಿಸಿದರು.

