Home » ಬಿ. ಬಿ. ಹೆಗ್ಡೆ ಕಾಲೇಜು : ತ್ರಾಸಿ ಕಡಲ ತೀರ ಸ್ವಚ್ಛತೆ
 

ಬಿ. ಬಿ. ಹೆಗ್ಡೆ ಕಾಲೇಜು : ತ್ರಾಸಿ ಕಡಲ ತೀರ ಸ್ವಚ್ಛತೆ

by Kundapur Xpress
Spread the love

ಕುಂದಾಪುರ  : ಇಲ್ಲಿನ ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು, ಕುಂದಾಪುರ ಇದರ ರೋವರ್ಸ್ & ರೇಂಜರ್ಸ್ ಘಟಕ, ಮೊಗವೀರ ಯುವ ಸಂಘಟನೆ (ರಿ.) ಉಡುಪಿ ಜಿಲ್ಲೆ, ಹೆಮ್ಮಾಡಿ ಘಟಕ, ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ (ರಿ.) ಅಂಬಲಪಾಡಿ, ಉಡುಪಿ ಹಾಗೂ ಗ್ರಾಮ ಪಂಚಾಯತ್, ತ್ರಾಸಿ ಇವರ ಸಂಯುಕ್ತ ಆಶ್ರಯದಲ್ಲಿ ಏಪ್ರಿಲ್ 14ರಂದು ತ್ರಾಸಿ ಕಡಲತೀರ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಮೊಗವೀರ ಯುವ ಸಂಘಟನೆ(ರಿ.), ಉಡುಪಿ ಜಿಲ್ಲೆ ಇದರ ಅಧ್ಯಕ್ಷರಾಗಿರುವ ರವೀಶ್ ಕೊರವಡಿ ಮಾತನಾಡಿ, ಈ ಸ್ವಚ್ಛತಾ ಕಾರ್ಯದಲ್ಲಿ ಯುವ ಸಮುದಾಯ ಸ್ವಯಂ ಪ್ರೇರಿತರಾಗಿ ಭಾಗವಹಿಸುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಾಲೇಜಿನ ರೇಂಜರ್ಸ್ ಘಟಕ ಸಂಯೋಜಕಿ ರೇವತಿ ಡಿ., ಮೊಗವೀರ ಯುವ ಸಂಘಟನೆ (ರಿ.), ಉಡುಪಿ ಜಿಲ್ಲೆ ಇದರ ಹೆಮ್ಮಾಡಿ ಘಟಕದ ಮಾಜಿ ಅಧ್ಯಕ್ಷ ಲೋಹಿತಾಶ್ವ ಆರ್. ಕುಂದರ್, ನಿಕಟ ಪೂರ್ವ ಅಧ್ಯಕ್ಷ ದಿನೇಶ್ ಕಾಂಚನ್ ಬಾಳಿಕೆರೆ, ಕಾರ್ಯದರ್ಶಿ ಜಯಂತ್ ಕುಂದರ್ ಬಾಳಿಕೆರೆ, ಕೋಶಾಧಿಕಾರಿ ಸಂತೋಷ ಮೊಗವೀರ, ಜಿಲ್ಲಾ ಸಮಿತಿಯ ಸದಸ್ಯರಾದ ಜನಾರ್ಧನ್ ಮೊಗವೀರ ತೊಪ್ಲು, ಘಟಕದ ಉಪಾಧ್ಯಕ್ಷರಾದ ಶ್ಯಾಮಲಾ ಜಿ. ಚಂದನ್ ಹಾಗೂ ಸಲಹೆಗಾರರಾದ ಗೋಪಾಲ್ ಚಂದನ್ ಹಾಗೂ ಜಿಲ್ಲಾ ಸಮಿತಿಯ ಸದಸ್ಯರು ಹಾಗೂ ತ್ರಾಸಿ ಗ್ರಾಮ ಪಂಚಾಯತ್ ಸಿಬ್ಬಂದಿ ಸಂದೀಪ್ ಪೂಜಾರಿ ಉಪಸ್ಥಿತರಿದ್ದರು.
ಕಾಲೇಜಿನ ರೋವರ್ಸ್ ಘಟಕದ ಸಂಯೋಜಕರು ಹಾಗೂ ಹೆಮ್ಮಾಡಿ ಘಟಕದ ಅಧ್ಯಕ್ಷರಾದ ಪ್ರವೀಣ್ ಮೊಗವೀರ ಗಂಗೊಳ್ಳಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

 

Related Articles

error: Content is protected !!