Home » ಎಕ್ಸಲೆಂಟ್ ವಿದ್ಯಾಸಂಸ್ಥೆ : ಜೆಇಇ ಮೈನ್‌ನಲ್ಲಿ ಉತ್ತಮ ಫಲಿತಾಂಷ
 

ಎಕ್ಸಲೆಂಟ್ ವಿದ್ಯಾಸಂಸ್ಥೆ : ಜೆಇಇ ಮೈನ್‌ನಲ್ಲಿ ಉತ್ತಮ ಫಲಿತಾಂಷ

ಎಕ್ಸಲೆಂಟ್ ವಿದ್ಯಾಸಂಸ್ಥೆ

by Kundapur Xpress
Spread the love

ಕುಂದಾಪುರ  : 12 ವರ್ಷಗಳ ಹಿಂದೆ ಕೇವಲ 40 ವಿದ್ಯಾರ್ಥಿಗಳಿಂದ ಆರಂಭವಾದ ಎಕ್ಸಲೆಂಟ್ ವಿದ್ಯಾಸಂಸ್ಥೆಇಂದು ವಿದ್ಯಾರ್ಥಿಗಳ ಸಂಖ್ಯೆಯಲ್ಲಿಯೂ ಸಾಧನೆಯಲ್ಲಿಯೂ ರಾಜ್ಯಕ್ಕೆ ಮಾದರಿಯಾಗಿ ಬೆಳೆಯುತ್ತಿದೆ . ನಮ್ಮ ಸಂಸ್ಥೆ ಇಂದು ಶೈಕ್ಷಣಿಕ, ಸಾಂಸ್ಕೃತಿಕ, ಕ್ರೀಡೆ ಹೀಗೆ ಎಲ್ಲಾ ರಂಗದಲ್ಲಿಯೂ ಕೂಡ ಎಕ್ಸಲೆಂಟ್ ತನ್ನದೇ ಆದ ಛಾಪನ್ನು ಮೂಡಿಸುತ್ತಾ ಬಂದಿದೆ ಎಂ ಮಹೇಶ್‌ ಹೆಗ್ಡೆ ತಿಳಿಸಿದರು 
ಅವರು ಪ್ರತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ ಜೆಇಇ ಮೈನ್ 2025 ರ ಫಲಿತಾಂಶ ಉಡುಪಿ, ಕುಂದಾಪುರ, ಬೈಂದೂರು ತಾಲ್ಲೂಕಿಗೆ ಎಕ್ಸಲೆಂಟ್ ಕಾಲೇಜು ಪ್ರಥಮ ಸ್ಥಾನಿಯಾಗಿದ್ದು 2024ರ ವರ್ಷದ ಫಲಿತಾಂಶಕ್ಕಿಂತ ಅತ್ಯುತ್ತಮ ಫಲಿತಾಂಶವನ್ನು ನಾವು  ಈ ಭಾರಿ ಪಡೆದಿದ್ದೇವೆ ಎಂದರು

2024ರ ಫಲಿತಾಂಶ 97.66 ಜೆಇಇ ಮೈನ್ಸ್ನಲ್ಲಿ ಪಡೆದರೆ ಈ ವರ್ಷ ಅನನ್ಯ ಯು ಶೆಟ್ಟಿ 97.69 ಪರ್ಸ್ನೆಟೈಲ್ ತೆಗೆದು ಅತ್ಯುತ್ತಮ ಫಲಿತಾಂಶ ಪಡೆದಿರುತ್ತಾರೆ. ಹಾಗೇ ವಿಷಯವಾರು ಫಲಿತಾಂಶದಲ್ಲಿ ಹಿಂದಿನ ವರ್ಷ 98.80 ಪರ್ಸ್ನೆಟೈಲ್ ತೆಗೆದರೆ ಈ ವರ್ಷ 2025ರ ಸಾಲಿನಲ್ಲಿ ಪ್ರಸ್ತುತಿ ಶೆಟ್ಟಿ 99.51ಪರ್ಸ್ನೆಟೈಲ್ ತೆಗೆದಿರುತ್ತಾರೆ. ಹಾಗೇ 90 ಪರ್ಸ್ನೆಟೈಲ್‌ಯಿಂದ 98 ಪರ್ಸ್ನೆಟೈಲ್ ವರೆಗೆ ಹಿಂದಿನ ವರ್ಷ ಕೇವಲ 14 ವಿದ್ಯಾರ್ಥಿಗಳು ಸ್ಥಾನ ಗಳಿಸಿದ್ದಾರೆ. ಈ ವರ್ಷ 90 ಪರ್ಸ್ನೆಟೈಲ್‌ಯಿಂದ 99.51 ಪರ್ಸ್ನೆಟೈಲ್ ವರೆಗೆ 21 ವಿದ್ಯಾರ್ಥಿಗಳು ಸ್ಥಾನವನ್ನು ಪಡೆದಿದ್ದಾರೆ. ತ್ರಿಶಾ ಪಿ ಶೆಟ್ಟಿ 98.58 ಅಮರ್‌ದೀಪ್ ಶೆಟ್ಟಿ 98.68 ಶ್ರೀ ಹರ್ಷ ಪೆನ್ನುಗೊಂಡಲ 97.42 ಸ್ಮರಣ್ ಎಂ 96.33, ಮನ್ವಿತ್ 96.32 ಪ್ರಜ್ವಲ್ ಕೆ 95.65 ಶಮನ ಯು ಶೆಟ್ಟಿ 95.59, ದೀಕ್ಷಿತ್ ಶೆಟ್ಟಿ 95.02 ಗಗನ್ 94.72 ಚಿರಾಗ್ ಎಂ.ಕೆ 94.44 ಸಿಂಚನ ಎಸ್ ಶೆಟ್ಟಿ 94.14 ಜಿತೇಶ್ ಶೆಟ್ಟಿ 93.55 ಆಕಾಶ್ 92.62, ಚಿತ್ರಾ ನಾಯಕ್ 91.37, ಅನ್ವಿತಾ ಪ್ರಭಾಕರ್ 91.28, ವೃತೀನ್ ಉದಯ್ ಕುಮಾರ್ 90.36 ತೇಜಸ್ವಿ ಕೃಷ್ಣಾನಂದ್ 90.21, ನಿಹಾಲ್ ಜೆ ಶೆಟ್ಟಿ 90.04, ಹಾಗೂ ಅವಿಜಿತ್ ಶೆಟ್ಟಿ 90.03 ಪರ್ಸ್ನೆಟೈಲ್ ಪಡೆದಿದದ್ದಾರೆ

ಈ ವಿದ್ಯಾರ್ಥಿಗಳ ಸಾಧನೆಗೆ ಆಡಳಿತ ಮಂಡಳಿಯ ಅಧ್ಯಕ್ಷರಾದ ಎಂ ಮಹೇಶ್ ಹೆಗ್ಡೆಯವರು ಅಭಿನಂದನೆ ಸಲ್ಲಿಸಿದ್ದು ಇದಕ್ಕೆ  ಹಗಲು ರಾತ್ರಿಯೆನ್ನದೆ ಅವಿರತವಾಗಿ ಶ್ರಮಿಸಿದ ಉಪನ್ಯಾಸಕ ಬಳಗ ಹಾಗೂ ವಿದ್ಯಾರ್ಥಿಗಳ ಪಾಲಕರಿಗೂ  ಎಂ ಮಹೇಶ್ ಹೆಗ್ಡೆಯವರು  ಕೃತಜ್ಞತೆ ಸಲ್ಲಿಸಿದ್ದಾರೆ

 

Related Articles

error: Content is protected !!