Home » ಗುರುಕುಲ:ಗುರುಪೂರ್ಣಿಮಾ ಆಚರಣೆ
 

ಗುರುಕುಲ:ಗುರುಪೂರ್ಣಿಮಾ ಆಚರಣೆ

by Kundapur Xpress
Spread the love

ಕುಂದಾಪುರ : ಗುರುಕುಲ ಪಬ್ಲಿಕ್ ಶಾಲೆಯಲ್ಲಿ ಗುರು ಪೂರ್ಣಿಮಾ ದಿನವನ್ನು  ಅರ್ಥಪೂರ್ಣವಾಗಿ ಆಚರಿಸಲಾಯಿತು. ವಿದ್ಯಾರ್ಥಿಗಳು ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪ ನಮನ ಮಾಡಿ, ಎಲ್ಲಾ ಶಿಕ್ಷಕರಿಗೂ ನಮಸ್ಕರಿಸಿ, ಪುಷ್ಪ ನೀಡಿ ಗುರುವಂದನೆ ಸಲ್ಲಿಸಿದರು. ಶಾಲಾ ಪ್ರಾಂಶುಪಾಲರಾದ ಶ್ರೀ.ಮೋಹನ್ ಕೆ.ಪ್ರಾಸ್ತಾವಿಕ ನುಡಿಯ ಜೊತೆಗೆ ಅತಿಥಿ ಪರಿಚಯ ಮಾಡಿದರು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ   ಡಾ .ವಾದಿರಾಜ ಭಟ್ಟ .ಜಿ .ಆರ್ ಸಹ  ಪ್ರಾಧ್ಯಾಪಕರು,ಎಂ.ಐ.ಟಿ.ಮಣಿಪಾಲ ಇವರು ಅರ್ಥಪೂರ್ಣ ಕಥೆಯ ಮೂಲಕ ತಮ್ಮ ಮಾತನ್ನು ಆರಂಭಿಸಿ, ಗುರು ಎಂದರೆ ಯಾರು ? ಗುರು ಎಂದರೆ ಏನು ?ಎಂಬುದನ್ನು ತಿಳಿಸುವುದರ ಜೊತೆಗೆ ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಮುಂದೆ ಗುರಿ ಇರಬೇಕು, ಹಿಂದೆ ಗುರು ಇರಬೇಕು ,ಆಗ ಮಾತ್ರ ಒಂದು ಅರ್ಥಪೂರ್ಣ ಜೀವನ ಸಾಧ್ಯ,ಈ ಆಚರಣೆ ಕೇವಲ ಒಂದು ದಿನಕಷ್ಟೆ ಅಥವಾ ಒಂದು ಶಾಲೆಗೆ ಮಾತ್ರ ಸೀಮಿತ ಅಲ್ಲ ,ಎಲ್ಲಾ ಹಂತಗಳಲ್ಲಿ ಆಚರಣೆ ಆಗಬೇಕು . ಅಂಧಕಾರವನ್ನು ಹೋಗಲಾಡಿಸಿ ಬೆಳಕು ಮೂಡಿಸುವ ಶಕ್ತಿ ಕೇವಲ ಗುರುವಿನಿಂದ ಮಾತ್ರ ಸಾಧ್ಯ. ಅದು ನಮ್ಮ ಬದುಕಿನ ಯಾವ ಹಂತದಲ್ಲಿ ಬೇಕಾದರೆ ಯಾವ ರೂಪದಲ್ಲಿ ಕೂಡ ಆಗಬಹುದು. ಅದನ್ನು ಗುರುತಿಸಿ ನಿಮ್ಮ ಭವಿಷ್ಯವನ್ನು ಉತ್ತಮ ರೀತಿಯಲ್ಲಿ ರೂಪಿಸಿಕೊಂಡು ದೇಶಕ್ಕೂ ಹಾಗೂ ಹೆತ್ತವರಿಗೆ ಗೌರವ ತರುವ ರೀತಿಯಲ್ಲಿ ಬಾಳಿ ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ಶಾಲಾ ಆಡಳಿತ ಮಂಡಳಿಯ ಜಂಟಿ ಕಾರ್ಯ ನಿರ್ವಾಹಕರಾದ ಶ್ರೀ.ಸುಭಾಶ್ಚಂದ್ರ ಶೆಟ್ಟಿ,  ಶ್ರೀಮತಿ ಅನುಪಮಾ.ಎಸ್. ಶೆಟ್ಟಿ  ಎಲ್ಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು  ಸಹಶಿಕ್ಷಕಿ ಸುಜಾತ ಕಿರಣ್ ಶೆಟ್ಟಿ ನಿರೂಪಿಸಿ ವಂದಿಸಿದರು

   

Related Articles

error: Content is protected !!