Home » ರೋಟರಾಕ್ಟ್ ಕ್ಲಬ್ ಪದಗ್ರಹಣ
 

ರೋಟರಾಕ್ಟ್ ಕ್ಲಬ್ ಪದಗ್ರಹಣ

by Kundapur Xpress
Spread the love

ಕುಂದಾಪುರ : ಡಾ. ಬಿ.ಬಿ. ಹೆಗ್ಡೆ ಕಾಲೇಜಿನ ರೋಟರಾಕ್ಟ್ ಕ್ಲಬ್‌ನ 2025-26ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ರೋಟರಿ ಕ್ಲಬ್ ಕುಂದಾಪುರ ಸಹಯೋಗದೊಂದಿಗೆ ಜರುಗಿತು. ರೋಟರಿ ಕ್ಲಬ್ ಕುಂದಾಪುರದ ಮಾಜಿ ಅಧ್ಯಕ್ಷರು ಹಾಗೂ ಜೋನ್ 1ರ ಮಾಜಿ ಅಸಿಸ್ಟೆಂಟ್ ಗವರ್ನರ್ ಕೊಡ್ಲಾಡಿ ಸುಭಾಷ್ ಚಂದ್ರ ಶೆಟ್ಟಿ ಸತತ ಪರಿಶ್ರಮ, ಸಮಯಪ್ರಜ್ಞೆ ಹಾಗೂ ನಾಯಕತ್ವ ಗುಣಗಳನ್ನು ವಿದ್ಯಾರ್ಥಿದೆಸೆಯಲ್ಲಿಯೇ ಮೈಗೂಡಿಸಿಕೊಂಡಲ್ಲಿ ಭವಿಷ್ಯದಲ್ಲಿ ಉತ್ತಮ ಜೀವನವನ್ನು ನಡೆಸಬಹುದು. ರೋಟರಿ ಅಂತಹ ಸೇವಾ ಸಂಸ್ಥೆಗಳಲ್ಲಿ ತೊಡಗಿಕೊಳ್ಳುವ ಮೂಲಕ ಸೇವೆಯೊಂದಿಗೆ ಮಾನವೀಯ ಮೌಲ್ಯಗಳನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಲು ಸಾಧ್ಯ ಎಂದು ಪದ ಪ್ರದಾನ ನೆರವೇರಿಸಿ, ಮಾತನಾಡಿದರು.
ಕಾಲೇಜಿನ ಉಪ-ಪ್ರಾಂಶುಪಾಲರಾದ ಡಾ. ಚೇತನ್ ಶೆಟ್ಟಿ ಕೋವಾಡಿ ಅಧ್ಯಕ್ಷತೆ ವಹಿಸಿದ್ದರು. ಕುಂದಾಪುರ ರೋಟರಿ ಕ್ಲಬ್‌ನ ಅಧ್ಯಕ್ಷರಾದ ನಾಗರಾಜ್ ಶೆಟ್ಟಿ ಅವರು ಶುಭ ಹಾರೈಸಿದರು.

ರೋಟರಿ ಕ್ಲಬ್ ಕುಂದಾಪುರ ಕಾರ್ಯದರ್ಶಿ ಸರ್ವೋದಯ ಪೂಜಾರಿ, ಸದಸ್ಯರಾದ ಪ್ರಕಾಶ್ಚಂದ್ರ ಶೆಟ್ಟಿ ಚಿತ್ತೂರು, ನಿರ್ಗಮನ ಅಧ್ಯಕ್ಷ ಪ್ರಥಮ್, ನಿರ್ಗಮನ ಕಾರ್ಯದರ್ಶಿ ಮಾನ್ಯ ಉಪಸ್ಥಿತರಿದ್ದರು. ರೋಟರಾಕ್ ಕ್ಲಬ್ ಸಂಯೋಜಕರಾದ ಗಿರಿರಾಜ ಭಟ್ ಸ್ವಾಗತಿಸಿ, ಶ್ರೀಮತಿ ವಿನಯಾ ವಿ. ಶೆಟ್ಟಿ ಅತಿಥಿಗಳನ್ನು ಪರಿಚಯಿಸಿ, ನೂತನ ಅಧ್ಯಕ್ಷ ವಿಶ್ವಾಸ್ ಮತ್ತು ರಕ್ಷಿತಾ ಮತ್ತು ಪದಾಧಿಕಾರಿಗಳು ಪದ ಸ್ವೀಕರಿಸಿದರು.

 

Related Articles

error: Content is protected !!