ಕುಂದಾಪುರ: ಭಾರತವು ವಿಶ್ವಕ್ಕೆ ಅನೇಕ ಕೊಡುಗೆಗಳನ್ನು ನೀಡಿದ್ದು ಅದರಲ್ಲಿ ಭಾರತದ ಕುಟುಂಬ ವ್ಯವಸ್ಥೆಯ ಪದ್ಧತಿಯು ಜಗತ್ತಿಗೆ ನೀಡಿದ ಶ್ರೇಷ್ಠ ಕೊಡುಗೆಗಳಲ್ಲಿ ಒಂದು ಎಂದು ಕುಟುಂಬ ಪ್ರಭೋಧನ್ ನ ಪ್ರಮುಖರಾದ ಸು.ರಾಮಣ್ಣ ನುಡಿದರು ಅವರು ಗುರುಕುಲ ಪಬ್ಲಿಕ್ ಸ್ಕೂಲ್ ನ ಶಿಕ್ಷಕ ಹಾಗೂ ಶಿಕ್ಷಕಿಯರ ಕುಟುಂಬದವರಿಗಾಗಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು
ನಮ್ಮ ಹಿರಿಯರು ಹೇಳಿದ ಹಾಗೇ ಮನೆಯೇ ಮೊದಲ ಪಾಠಶಾಲೆ ತಾಯಿಯೇ ಮೊದಲ ಗುರು ಎಂದ ಅವರು ಪ್ರಾಣಿಯಂತೆ ಹುಟ್ಟುವ ಮನುಷ್ಯ ಕುಟುಂಬದವರ ಸಂಸ್ಕಾರದಿಂದ ಮಾನವನಾಗಿ ಮಹಾಮಾನವನಾಗಿ ಕೊನೆಯಲ್ಲಿ ದೇವಮಾನವನಾಗುತ್ತಾನೆ ಎಂದರು
ಪಾಶ್ಚಾತ್ಯರಕುಟುಂಬ ವ್ಯವಸ್ಥೆಯು ಕ್ಷೀಣಿಸುತ್ತಿದ್ದು ಅವರು ಭಾರತೀಯ ಕುಟುಂಬ ವ್ಯವಸ್ಥೆಯನ್ನು ಅನುಸರಿಸುತ್ತಿರುವ ಈ ಕಾಲಘಟ್ಟದಲ್ಲಿ ಭಾರತೀಯರಾದ ನಾವು ನಮಗೆ ಅರಿವಿಲ್ಲದಂತೆ ಪಾಶ್ಚಾತ್ಯ ಕುಟುಂಬ ಪದ್ಧತಿಯನ್ನು ಅನುಸರಿಸಲು ಹೊರಟಿರುವುದು ಅತ್ಯಂತ ಖೇಧಕರ ಎಂದರು ವಿದೇಶಿ ಕುಟುಂಬವು ವ್ಯವಸ್ಥೆಯಲ್ಲಿನ ಸಂಭಂಧವು ಹಕ್ಕು ಎಂದು ತಿಳಿದರೆ ಭಾರತೀಯ ಕುಟುಂಬ ವ್ಯವಸ್ಥೆಯಲ್ಲಿ ಸಂಭಂಧವನ್ನು ಕರ್ತವ್ಯವೆಂದು ನಿಭಾಯಿಸುತ್ತಿದ್ದು ಇತ್ತೀಚಿನ ದಿನಗಳಲ್ಲಿ ಭಾರತೀಯರಾದ ನಾವು ದೀಪವನ್ನು ನಂದಿಸಿ ಹುಟ್ಟುಹಬ್ಬಗಳನ್ನು ಆಚರಿಸಿಕೊಳ್ಳುವುದು ಎಷ್ಟು ಸರಿ ಎಂದು ಅವರು ಪ್ರಶ್ನಿಸಿದರು
ಮುಂದಿನ ದಿನಗಳಲ್ಲಿ ಮನೆ ಮತ್ತು ಶಾಲೆಗಳಲ್ಲಿ ಭಾರತೀಯ ಜೀವನ ಮೌಲ್ಯಗಳನ್ನು ಕಲಿಸುವುದರ ಮೂಲಕ ಸಮೃದ್ಧ ಸಮಾಜವನ್ನು ಕಟ್ಟಬೇಕೆಂದು ಕರೆಯಿತ್ತರು ಭಾಂಡ್ಯ ಎಜುಕೇಶನಲ್ ಟ್ರಸ್ಟ್ ನ ವಿಶ್ವಸ್ಥರಾದ ಸುಭಾಶ್ ಚಂದ್ರ ಶೆಟ್ಟಿ ಹಾಗೂ ವಿಶ್ವಸ್ಥರಾದ ಅನುಪಮ ಸುಭಾಶ್ ಚಂದ್ರ ಶೆಟ್ಟಿ ಉಪಸ್ಥತರಿದ್ದರು ಕಟ್ಕೇರಿ ಪ್ರೇಮಾನಂದ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿ ಅನುಪಮ ಸುಭಾಶ್ ಚಂದ್ರ ಶೆಟ್ಟಿಯವರು ತಮ್ಮ ಅನುಭವವನ್ನು ಹಂಚಿಕೊಂಡರು ವಿಶಾಲಾ ಶಟ್ಟಿಯವರು ಕಾರ್ಯಕ್ರಮದ ನಿರೂಪಿಸಿ ವಂದಿಸಿದರು