Home ಶಿಕ್ಷಣತ್ರಿಶಾ ಕ್ಲಾಸಸ್ : ಸಿ ಎ ಫೈನಲ್ ಉತ್ತೀರ್ಣ

ತ್ರಿಶಾ ಕ್ಲಾಸಸ್ : ಸಿ ಎ ಫೈನಲ್ ಉತ್ತೀರ್ಣ

by Kundapur Xpress

 ಕಟಪಾಡಿ : ಹೊಸದಿಲ್ಲಿಯ ಲೆಕ್ಕಪರಿಶೋಧಕರ ಸಂಸ್ಥೆ (ಐಸಿಎಐ) ಮೇ 2024ರಲ್ಲಿ ನಡೆಸಿದ ಸಿಎ ಅಂತಿಮ ಪರೀಕ್ಷೆಯಲ್ಲಿ ಹಿರಿಯಡ್ಕದ ಕೆ ಪ್ರಮೋದ್ ಶೆಣೈ ಉತ್ತೀರ್ಣರಾಗಿದ್ದಾರೆ. ಅವರು ಕೆ ಏಕನಾಥ ಶೆಣೈ ಹಾಗೂ ಕೆ ಮಾಲಿನಿ ಶೆಣೈ ದಂಪತಿಗಳ ಪುತ್ರರಾಗಿದ್ದು, ಬೆಂಗಳೂರಿನ ಗುರು ಆ್ಯಂಡ್ ಜನ ಸಂಸ್ಥೆಯಲ್ಲಿ ತಮ್ಮ ಆರ್ಟಿಕಲ್ ಶಿಪ್ ನ್ನು ಪೂರೈಸಿಕೊಂಡಿದ್ದಾರೆ. ಸಿಎ ಫೌಂಡೇಶನ್, ಸಿಎ ಇಂಟರ್ಮೀಡಿಯಟ್ ತರಬೇತಿಯನ್ನು ತ್ರಿಶಾ ಕ್ಲಾಸಸ್ ಉಡುಪಿಯಲ್ಲಿ ಹಾಗೂ ಪದವಿ ವಿದ್ಯಾಭ್ಯಾಸವನ್ನು ಕಟಪಾಡಿಯ ತ್ರಿಶಾ ವಿದ್ಯಾ ಸಂಧ್ಯಾ ಕಾಲೇಜಿನಲ್ಲಿ ಪಡೆದುಕೊಂಡಿದ್ದಾರೆ

Related Articles