Home » ಐ ಎಂ ಜೆ ಇನ್ಸ್ಟಿಟ್ಯೂಟ್ :ಶ್ಲಾಘನೀಯ ಫಲಿತಾಂಶ
 

ಐ ಎಂ ಜೆ ಇನ್ಸ್ಟಿಟ್ಯೂಟ್ :ಶ್ಲಾಘನೀಯ ಫಲಿತಾಂಶ

by Kundapur Xpress
Spread the love

ಕುಂದಾಪುರ : ಮಂಗಳೂರು ವಿಶ್ವವಿದ್ಯಾನಿಲಯದಿಂದ ಪ್ರಥಮ ವರ್ಷದ ಮೊದಲ ಸೆಮಿಸ್ಟರ್ ಬ್ಯಾಚುಲರ್ ಆಫ್ ಕಾಮರ್ಸ್ (ಬಿಕಾಂ) ಮತ್ತು ಬ್ಯಾಚ್ಯುಲರ್ ಆಫ್ ಕಂಪ್ಯೂಟರ್ ಅಪ್ಲಿಕೇಶನ್ಸ್ (ಬಿಸಿಎ) ಪರೀಕ್ಷೆಗಳ ಫಲಿತಾಂಶಗಳನ್ನು ಪ್ರಕಟಿಸಲಾಗಿದ್ದು, ಐಎಂಜೆಐಎಸ್ ಸಿ ಸಂಸ್ಥೆಯ ವಿದ್ಯಾರ್ಥಿಗಳು ಗಮನಾರ್ಹ ಸಾಧನೆಯನ್ನು ಮಾಡಿದ್ದಾರೆ. ಈ ಫಲಿತಾಂಶವು ಯುವ ಮನಸ್ಸುಗಳ ಸಮರ್ಪಣೆ ಮತ್ತು ಕಠಿಣ ಪರಿಶ್ರಮವನ್ನು ಬಿಂಬಿಸುವುದರ ಜೊತೆಗೆ ವಿದ್ಯಾರ್ಥಿಗಳು ತಮ್ಮ ಸಾಧನೆಗಳನ್ನು ಗುರುತಿಸಿಕೊಳ್ಳಲು ಅವಕಾಶವಾಗಿದೆ. ಶೈಕ್ಷಣಿಕ ಪ್ರಯಾಣದುದ್ದಕ್ಕೂ ವಿದ್ಯಾರ್ಥಿಗಳನ್ನು ಪೋಷಿಸುವ ಮತ್ತು ಬೆಂಬಲಿಸುವಲ್ಲಿ ಉಪನ್ಯಾಸಕರು, ಪೋಷಕರು ಮತ್ತು ಶಿಕ್ಷಣ ಸಂಸ್ಥೆಯ ಪ್ರಯತ್ನಕ್ಕೆ ಕನ್ನಡಿಯಾಗಿದೆ. ಅಂತಹ ಪ್ರತಿಭಾವಂತ ಮತ್ತು ದೃಢನಿಶ್ಚಯದ ವಿದ್ಯಾರ್ಥಿಗಳೊಂದಿಗೆ, ಉಜ್ವಲ ಭವಿಷ್ಯವನ್ನು ರೂಪಿಸುವ ಬಲವಾದ ಭರವಸೆಯನ್ನು ಐಎಂಜೆ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ & ಕಾಮರ್ಸ್ ಸಂಸ್ಥೆ ಹೊಂದಿದೆ.

ಬಿಕಾಂ ಫಲಿತಾಂಶ :

ಬಿಕಾಂ ಪರೀಕ್ಷೆಗಳಿಗೆ ಹಾಜರಾದ ವಿದ್ಯಾರ್ಥಿಗಳಲ್ಲಿ, ಶೇಕಡಾ 91% ವಿದ್ಯಾರ್ಥಿಗಳು ತೇರ್ಗಡೆ ಶ್ರೇಣಿಯನ್ನು ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಿದ್ಯಾರ್ಥಿಗಳ ಶೈಕ್ಷಣಿಕ ವಿಷಯಗಳಲ್ಲಿನ ಸಮರ್ಪಣೆ ಮತ್ತು ಪರಿಶ್ರಮವನ್ನು ಕಾಣಬಹುದು. ಬಿಕಾಂ ಸ್ಟ್ರೀಮ್‍ನಲ್ಲಿ ಕಾಲೇಜಿನಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿನಿ ಸಭಾ 8.46 ರ ಅತ್ಯುತ್ತಮ GPA ಅನ್ನು ಗಳಿಸಿದ್ದು,

ಬಿಕಾಂ ಪರೀಕ್ಷೆಯಲ್ಲಿ ಉತ್ತೀರ್ಣರಾದ ಶೇಕಡಾ 20% ವಿದ್ಯಾರ್ಥಿಗಳು 8 ಕ್ಕಿಂತ ಹೆಚ್ಚಿನ GPA ಅನ್ನು ಸಾಧಿಸಿದ್ದಾರೆ. ಉಳಿದಂತೆ ಉತ್ತೀರ್ಣರಾದ ಎಲ್ಲ ವಿದ್ಯಾರ್ಥಿಗಳು ಏಳಕ್ಕಿಂತ ಹೆಚ್ಚಿನ GPAಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದು ಉನ್ನತ ಶೈಕ್ಷಣಿಕ ಗುಣಮಟ್ಟವನ್ನು ಕಾಪಾಡಿಕೊಳ್ಳುವಲ್ಲಿ ಶಿಕ್ಷಣ ಸಂಸ್ಥೆಯ ಸಮರ್ಪಣೆಯನ್ನು ಸೂಚಿಸುತ್ತದೆ. ಹಾಗೂ ವಿದ್ಯಾರ್ಥಿಗಳ ಸತತವಾದ ಶ್ರೇಷ್ಠತೆಗಾಗಿ ಮಾಡಿದ ಪ್ರಯತ್ನಗಳಿಗೆ ಸಾಕ್ಷಿಯಾಗಿದೆ.

ಬಿ.ಸಿ.ಎ. ಫಲಿತಾಂಶಗಳು,

ಬಿ.ಸಿ.ಎ. ಫಲಿತಾಂಶಗಳು ಪರೀಕ್ಷೆಗಳಿಗೆ ಹಾಜರಾದ 80 ವಿದ್ಯಾರ್ಥಿಗಳ ಪ್ರಯತ್ನ ಮತ್ತು ಫಲಿತಾಂಶ ಉತ್ತಮವಾಗಿದ್ದು, ಅವರಲ್ಲಿ ಶೇಕಡಾ 77% ತೇರ್ಗಡೆ ಶ್ರೇಣಿಗಳನ್ನು ಪಡೆದುಕೊಂಡಿರುವುದರಲ್ಲಿ ಅವರ ಕಠಿಣ ಪರಿಶ್ರಮ ಮತ್ತು ಅವರ ಅಧ್ಯಯನದ ಬದ್ಧತೆಯನ್ನು ನಾವು ಕಾಣಬಹುದು. ಬಿ.ಸಿ.ಎ. ಸ್ಟ್ರೀಮ್‍ನಲ್ಲಿ ಕಾಲೇಜಿನಲ್ಲಿ ಅತ್ಯಧಿಕ ಅಂಕವನ್ನು ಪಡೆದಿರುವ ವಿದ್ಯಾರ್ಥಿನಿ ನೇತ್ರಾವತಿ 9.44 ರಷ್ಟು GPA ಸಾಧಿಸಿದ್ದಾರೆ.

ಈ ಅಸಾಧಾರಣ ಕಾರ್ಯಕ್ಷಮತೆಯ ವಿಷಯದಲ್ಲಿ ವಿದ್ಯಾರ್ಥಿನಿಯ ಪ್ರಾವೀಣ್ಯತೆಯನ್ನು ಮಾತ್ರವಲ್ಲದೆ ಕಂಪ್ಯೂಟರ್ ಅಪ್ಲಿಕೇಶನ್‍ಗಳ ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡುವ ಸಾಮಥ್ರ್ಯವನ್ನು ತೋರಿಸುತ್ತದೆ. ಇದಲ್ಲದೆ, ಬಿ.ಸಿ.ಎ. ಪರೀಕ್ಷೆಗಳಲ್ಲಿ ಉತ್ತೀರ್ಣರಾದ ಒಟ್ಟು ವಿದ್ಯಾರ್ಥಿಗಳ ಪೈಕಿ ಶೇಕಡಾ 26% ವಿದ್ಯಾರ್ಥಿಗಳು 8 GPA ಗಿಂತ ಹೆಚ್ಚಿನ ಅಂಕಗಳನ್ನು ಗಳಿಸಿದ್ದಾರೆ. ಈ ಅಂಕಿ ಅಂಶವು ಶೈಕ್ಷಣಿಕ ಯಶಸ್ಸಿಗೆ ಸಂಸ್ಥೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಸಮರ್ಪಣೆಯನ್ನು ಪ್ರತಿಬಿಂಬಿಸುತ್ತದೆ

   

Related Articles

error: Content is protected !!