Home » ಐ .ಎಮ್.ಜೆ ಇನ್ಸ್ಟಿಟ್ಯೂಷನ್ಸ್ ಯಂಗ್ ಲೀಡರ್ ಅವಾರ್ಡ್ 2025.
 

ಐ .ಎಮ್.ಜೆ ಇನ್ಸ್ಟಿಟ್ಯೂಷನ್ಸ್ ಯಂಗ್ ಲೀಡರ್ ಅವಾರ್ಡ್ 2025.

by Kundapur Xpress
Spread the love

ಮೂಡ್ಲಕಟ್ಟೆ : ದೇಶದ ಪ್ರಗತಿಗೆ ಮತ್ತು ಸ್ಪರ್ಧಾತ್ಮಕ ಜಗತ್ತಿಗೆ ಯುವ ನಾಯಕರನ್ನು ರೂಪಿಸುವ ನಿಟ್ಟಿನಲ್ಲಿ ಮತ್ತು ಯುವನಾಯಕತ್ವದ ಮಹತ್ವ ಮತ್ತು ಅರಿವು ಮೂಡಿಸುವ ಉದ್ದೇಶದಿಂದ ಮೂಡ್ಲಕಟ್ಟೆ ಐ ಎಂ ಜೆ ಇನ್ಸ್ಟಿಟ್ಯೂಷನ್ಸ್ ರವರಿಂದ ಐ . ಎಮ್. ಜೆ. ಯಂಗ್ ಲೀಡರ್ ಅವಾರ್ಡ್ 2025 ಎಂಬ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ.
ಈ ಸ್ಪರ್ಧೆಯ ಮೂಲ ಉದ್ದೇಶ ಯುವ ನಾಯಕತ್ವವನ್ನು ಉತ್ತೇಜಿಸುವುದು ಮತ್ತು ಈ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವುದು. ಒಬ್ಬ ವಿದ್ಯಾರ್ಥಿ ಯುವ ನಾಯಕನಾಗಿ ರೂಪುಗೊಳ್ಳಬೇಕಾದರೆ ಅವನಿಗೆ ಇರಬೇಕಾದ ಅರ್ಹತೆ ಮತ್ತು ತಯಾರಿ ಹೇಗಿರಬೇಕು ಮತ್ತು ಸಂವಹನ ಕಲೆಯು ವಿದ್ಯಾರ್ಥಿ ಜೀವನದಲ್ಲಿ ಹೇಗೆ ಮಹತ್ವದ ಪಾತ್ರ ವಹಿಸುತ್ತದೆ ಎನ್ನುವುದು ಸ್ಪರ್ಧೆ ಆಯೋಜನೆಯ ಪರಿಕಲ್ಪನೆ.
ಈ ಸ್ಪರ್ಧೆಯನ್ನು ಪಿ.ಯು ಸಿ. ಕಾಲೇಜಿನ ವಿದ್ಯಾರ್ಥಿಗಳಿಗೆ ಆಯೋಜಿಸುತ್ತಿದ್ದು ಸ್ಪರ್ಧೆಯಲ್ಲಿ ಸರಿ ಸುಮಾರು 30 ಕ್ಕೂ ಹೆಚ್ಚು ಕಾಲೇಜಿನ 300 ವಿದ್ಯಾರ್ಥಿಗಳು ಪ್ರಥಮ ಹಂತದಲ್ಲಿ ಅವರವರ ಕಾಲೇಜಿನಲ್ಲಿ ಪಾಲ್ಗೊಂಡಿರುತ್ತಾರೆ ಅಲ್ಲಿಯೂ. ಅವರಿಗೆ ಸೂಕ್ತ ಬಹುಮಾನ ಪ್ರಮಾಣಪತ್ರ ನೀಡಲಾಗಿದೆ. ಸ್ಪರ್ಧೆಯ ಎರಡನೆ ಮತ್ತು ಅಂತಿಮ ಹಂತ ಎಂ ಐ ಟಿ ಕುಂದಾಪುರ ಕ್ಯಾಂಪಸ್ನಲ್ಲಿ ನೆಡೆಯುತ್ತಿದೆ.
ಅಂತಿಮ ಸ್ಪರ್ಧೆ (ವಿವೇಕಾನಂದ ಜಯಂತಿ ರಾಷ್ಟ್ರೀಯ ಯುವ ದಿನಾಚರಣೆಯ ಸಂದರ್ಭ)
ಐ . ಎಮ್. ಜೆ. ಯಂಗ್ ಲೀಡರ್ ಅವಾರ್ಡ್ 2025 ಇದರ ಅಂತಿಮ ಸ್ಪರ್ಧೆಯನ್ನು ಶ್ರೀ ವಿವೇಕಾನಂದರ ಜನ್ಮ ದಿನಾಚರಣೆಯ ಅಂಗವಾಗಿ ಜನವರಿ 10 ರಂದು ಮೂಡ್ಲಕಟ್ಟೆ ಕ್ಯಾಂಪಸ್ ನಲ್ಲಿ ಹಮ್ಮಿಕೊಳ್ಳಲಾಗಿದೆ. ಅಂತಿಮ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿ ಐ . ಎಮ್. ಜೆ. ಯಂಗ್ ಲೀಡರ್ ಅವಾರ್ಡ್ 2025 ಆಕರ್ಷಕ ಟ್ರೋಪಿ ಜೊತೆಯಲ್ಲಿ ನಗದು ಬಹುಮಾನ ರೂಪಾಯಿ 10000 ಮತ್ತು ಪ್ರಮಾಣ ಪತ್ರ ಸ್ವೀಕರಿಸಲಿದ್ದಾರೆ. ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿ ನಗದು ಬಹುಮಾನ ರೂಪಾಯಿ 5000, ಆಕರ್ಷಕ ಟ್ರೋಪಿ ಮತ್ತು ಪ್ರಮಾಣ ಪತ್ರ ಸ್ವೀಕರಿಸಲಿದ್ದಾರೆ. ತೃತೀಯ ಬಹುಮಾನ 2000, ಆಕರ್ಷಕ ಟ್ರೋಪಿ ಮತ್ತು ಪ್ರಮಾಣ ಪತ್ರ ಸ್ವೀಕರಿಸಲಿದ್ದಾರೆ. ಸ್ಪರ್ಧೆಯ ವಿವಿಧ ಹಂತಗಳಲ್ಲಿಯೂ ಅರ್ಹ ವಿದ್ಯಾರ್ಥಿಗೆ ಬಹುಮಾನವನ್ನು ನೀಡಲಾಗುವುದು.
ಅತಿಥಿಗಳ ವಿವರ.
ಜನವರಿ 10 ರಂದು ನಡೆಯುವ ಅಂತಿಮ ಸ್ಪರ್ಧೆಯ ಉದ್ಘಾಟನಾ ಸಮಾರಂಭದಲ್ಲಿ ಸಮಾಜ ಸೇವೆಯಲ್ಲಿ ಹೆಸರುಮಾಡಿರುವ ವಿದ್ಯಾರ್ಥಿ ಮಿತ್ರ, ಹಾವೇರಿ ಹಾನಗಲ್ ನವರಾದ ಶ್ರೀ ರಮಣಗೌಡ ಬಿ ಪಾಟೀಲ್ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಶ್ರೀ ವಿಘ್ನೇಶ್ವರ ಭಟ್, ಪ್ರಿನ್ಸಿಪಾಲ ಕರ್ನಾಟಕ ಪಬ್ಲಿಕ್ ಸ್ಕೂಲ್ ಬಿದ್ಕಲಕಟ್ಟೆ ಇವರು ಗೌರವ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀ ಮಾರುತಿ, ಡೆಪ್ಯೂಟಿ ಡೈರೆಕ್ಟರ್, ಡಿ ಪಿ ಯು ಇ ಉಡುಪಿ ಜಿಲ್ಲೆ ಅವರು ಭಾಗವಹಿಸಲಿದ್ದಾರೆ ಎರಡೂ ಕಾರ್ಯಕ್ರಮಕ್ಕೂ ಸಭೆಯ ಅಧ್ಯಕ್ಷತೆಯನ್ನು ಐ. ಎಮ್. ಜೆ. ವಿದ್ಯಾ ಸಂಸ್ಥೆಗಳ ಅಧ್ಯಕ್ಷರಾದ ಶ್ರೀಯುತ ಸಿದ್ಧಾರ್ಥ ಜೆ ಶೆಟ್ಟಿಯವರು ವಹಿಸಲಿದ್ದಾರೆ. ಸಮಾರಂಭದಲ್ಲಿ ಸಂಸ್ಥೆಯ ಬ್ರಾಂಡ್ ಬಿಲ್ಡಿಂಗ್ ನಿರ್ದೇಶಕರಾದ ಡಾ|| ರಾಮಕೃಷ್ಣ ಹೆಗ್ಡೆ, ಎಂಐಟಿ ಕುಂದಾಪುರದ ಪ್ರಾಂಶುಪಾಲರಾದ ಡಾ|| ಅಬ್ದುಲ್ ಕರೀಂ, ಮೂಡ್ಲಕಟ್ಟೆ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಪ್ರೊಫೆಸರ್ ಜೆನಿಫರ್ ಮ್ಯಾನೇಜಸ್, ಐ ಎಂ ಜೆ ಡಿಗ್ರಿ ಕಾಲೇಜಿನ ಪ್ರಾಂಶುಪಾಲರಾದ ಡಾ|| ಪ್ರತಿಭಾ ಎಂ ಪಟೇಲ್ ಉಪಸ್ಥಿತರಿರುತ್ತಾರೆ.

 

Related Articles

error: Content is protected !!