Home » ಶೈಕ್ಷಣಿಕ ಕ್ಷೇತ್ರದಲ್ಲಿ ಉತ್ತಮ ಶಿಕ್ಷಣದ ಗುರಿ
 

ಶೈಕ್ಷಣಿಕ ಕ್ಷೇತ್ರದಲ್ಲಿ ಉತ್ತಮ ಶಿಕ್ಷಣದ ಗುರಿ

ತ್ರಿಶಾ ಸಂಸ್ಥೆ

by Kundapur Xpress
Spread the love

ಉಡುಪಿ : ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ 25 ವರ್ಷಗಳಿಂದ ಸಿಎ, ಸಿಎಸ್ , ಮುಂತಾದ ವೃತ್ತಿಪರ ಕೋರ್ಸುಗಳಿಗೆ ಗುಣಮಟ್ಟದ ತರಬೇತಿಯನ್ನು ನೀಡುತ್ತಿರುವ ತ್ರಿಶಾ ಸಂಸ್ಥೆಯು ಉಡುಪಿ , ಮಂಗಳೂರು ಹಾಗೂ ಬೆಂಗಳೂರಿನಲ್ಲಿ ತಮ್ಮ ಅಂಗ ಸಂಸ್ಥೆಯನ್ನು ಸ್ಥಾಪಿಸಿಕೊಂಡಿದೆ . ಈ ವಿದ್ಯಾ ಸಂಸ್ಥೆಯು ಪದವಿ ಹಾಗೂ ಪದವಿ ಪೂರ್ವ ಶಿಕ್ಷಣವನ್ನು ನೀಡುತ್ತಿದ್ದು, ಸುಮಾರು 75,000ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ವ್ಯಾಸಂಗ ಮುಗಿಸಿದ್ದು , ಪ್ರತಿಷ್ಠಿತ ಸಂಸ್ಥೆಗಳಲ್ಲಿ ತಮ್ಮ ವೃತ್ತಿಪರ ಜೀವನವನ್ನು ನಡೆಸುತ್ತಿದ್ದಾರೆ.
ಪದವಿ ಕಾಲೇಜುಗಳು :
ಬಿಕಾಂ ಪದವಿಯೊಂದಿಗೆ ಸಿಎ, ಸಿ ಎಸ್, ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ಒಂದೇ ಸೂರಿನಡಿ ನೀಡುವ ನಿಟ್ಟಿನಲ್ಲಿ ಆರಂಭವಾದ ಸಂಸ್ಥೆ, ಕಟಪಾಡಿಯಲ್ಲಿ ತ್ರಿಶಾ ವಿದ್ಯಾ ಕಾಲೇಜು ಹಾಗೂ ತ್ರಿಶಾ ವಿದ್ಯಾ ಸಂಧ್ಯಾ ಕಾಲೇಜು ಮತ್ತು ಮಂಗಳೂರಿನಲ್ಲಿ ತ್ರಿಶಾ ಕಾಲೇಜು ಹಾಗೂ ತ್ರಿಶಾ ಸಂಧ್ಯಾ ಕಾಲೇಜು ಎನ್ನುವ ಶಾಖೆಯನ್ನು ಸ್ಥಾಪಿಸಿಕೊಂಡು ವಿದ್ಯಾರ್ಥಿಗಳಿಗೆ ವಿನೂತನ ಶೈಲಿಯ ಬಿಕಾಂ ಪದವಿಯೊಂದಿಗೆ ಮೌಲ್ಯಧಾರಿತ ವಿಷಯಗಳನ್ನು ಬೋಧಿಸುತ್ತಿದೆ. ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ, ವ್ಯಕ್ತಿತ್ವ ವಿಕಸನ , ಎಂಬಿಎ ಪರೀಕ್ಷಾ ತಯಾರಿ , ಸ್ವಉದ್ಯಮ ಮಾಡಲು ಬಯಸುವವರಿಗೆ ತ್ರಿಶಾ ಸಂಸ್ಥೆಯು ಫೋಕಸ್ 360 (Focus 360) ಎನ್ನುವ ವಿನೂತನ ಬಿಕಾಂ ಪದವಿಯನ್ನು ನೀಡುತ್ತಲಿದೆ.

ಕಡಿಮೆ ವೆಚ್ಚದಲ್ಲಿ ಕಂಪ್ಯೂಟರ್ ಕ್ಷೇತ್ರದಲ್ಲಿ ಹೆಚ್ಚಿನ ಜ್ಞಾನವನ್ನು ಕಲಿಯಲು ಸಹಕಾರಿಯಾಗುವ ಕೋರ್ಸ್ ಬಿಸಿಎ. ಪಠ್ಯದ ಕಲಿಕೆಯನ್ನು ಪ್ರಾಯೋಗಿಕ ಅನುಭವದೊಂದಿಗೆ ಸಂಯೋಜಿಸುವ ಮೂಲಕ , ಕಂಪ್ಯೂಟರ್ ಅಪ್ಲಿಕೇಶನ್ಗಳ ಕ್ಷೇತ್ರದಲ್ಲಿ ಪರಿಣಿತರಾಗುವಂತೆ ತ್ರಿಶಾ ಸಂಸ್ಥೆ ಈ ಕೋರ್ಸ್ ಅನ್ನು ವಿನ್ಯಾಸಗೊಳಿಸಿದೆ.
ಪದವಿಪೂರ್ವ ಕಾಲೇಜುಗಳು (ವಿಜ್ಞಾನ ಹಾಗೂ ವಾಣಿಜ್ಯ) :
ತ್ರಿಶಾ ವಿದ್ಯಾ ಕಾಲೇಜು ಕಟಪಾಡಿ ಯಲ್ಲಿ ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದ ಜೊತೆಗೆ ಸಿಎ, ಸಿಎಸ್, ಸಿಇಟಿ, ಜೆಇಇ , ನೀಟ್ ತರಬೇತಿ ಹಾಗೂ
ಶ್ರೀ ರಾಮಾಶ್ರಮ ಪಿಯು ಕಾಲೇಜು ಯೆಯ್ಯಾಡಿ , ಮಂಗಳೂರಿನಲ್ಲಿ ವಾಣಿಜ್ಯ ವಿಭಾಗದ ಜೊತೆಗೆ ಸಿಎ, ಸಿಎಸ್, ಇಪ್ ಮ್ಯಾಟ್ (IPMAT), ಕ್ಲಾಟ್ (CLAT) ತರಬೇತಿಯನ್ನು ನೀಡಲಾಗುತ್ತದೆ. ಜೊತೆಗೆ ವಸತಿ ಸೌಲಭ್ಯವನ್ನು ಹೊಂದಿದೆ.

ತ್ರಿಶಾ ಸಂಸ್ಥೆಯು ಬಡ ಹಾಗೂ ಪ್ರತಿಭಾನ್ವಿತ ಅರ್ಹ ವಿದ್ಯಾರ್ಥಿಗಳಿಗೆ 2023-24ನೇ ಶೈಕ್ಷಣಿಕ ವರ್ಷದಲ್ಲಿ ಒಟ್ಟು 27.5 ಲಕ್ಷ ರೂಪಾಯಿಗಳ ವಿದ್ಯಾರ್ಥಿವೇತನವನ್ನು ಒದಗಿಸಿದೆ . ಪ್ರಸ್ತುತ 2024-25 ನೇ ಶೈಕ್ಷಣಿಕ ಸಾಲಿನಲ್ಲಿಯೂ ವಿದ್ಯಾರ್ಥಿಗಳಿಗೆ ಸಂಸ್ಥೆಯು ಸುಮಾರು 30 ಲಕ್ಷಗಳಿಂತಲೂ ಹೆಚ್ಚು ವಿದ್ಯಾರ್ಥಿವೇತನವನ್ನು ನೀಡುವ ಗುರಿಯಾಗಿಸಿಕೊಂಡಿದೆ. ಈಗಾಗಲೇ ದಾಖಲಾತಿ ಪ್ರಾರಂಭವಾಗಿದ್ದು , ಹೆಚ್ಚಿನ ಮಾಹಿತಿಗಾಗಿ https://tiny.cc/TrishaCollegeEnquiryForm ಈ ಲಿಂಕ್ ನ ಮೂಲಕ ನೋಂದಾವಣೆ ಮಾಡಬಹುದು.

   

Related Articles

error: Content is protected !!