Home » ಜನತಾ ಪ್ರೇರಣಾ 2024 ಮಾಹಿತಿ ಕಾರ್ಯಾಗಾರ
 

ಜನತಾ ಪ್ರೇರಣಾ 2024 ಮಾಹಿತಿ ಕಾರ್ಯಾಗಾರ

by Kundapur Xpress
Spread the love

ಹೆಮ್ಮಾಡಿ ; ಜನತಾ ಪದವಿಪೂರ್ವ ಕಾಲೇಜು ಹೆಮ್ಮಾಡಿಯಲ್ಲಿ ಬ್ಯಾಂಕಿಂಗ್, ಅಗ್ನಿವೀರ್, ಬಾಲ ನ್ಯಾಯ ಕಾಯ್ದೆಗಳು ಹಾಗೂ NATA ಈ ವಿಷಯಗಳ ಕುರಿತಾಗಿ ಮಾಹಿತಿ ಕಾರ್ಯಾಗಾರ ಹೆಮ್ಮಾಡಿಯ ಜಯಶ್ರೀ ಸಭಾ ಭವನದಲ್ಲಿ ನಡೆಯಿತು.ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕರ್ನಾಟಕ ಬ್ಯಾಂಕ್ ಶಿರೂರಿನ ವ್ಯವಸ್ಥಾಪಕರಾದ ಶ್ರೀ ರಾದೇಶ್ ಕಾಮತ್ ರವರು ಸ್ಪರ್ಧಾತ್ಮಕ ಯುಗದಲ್ಲಿ ಇಂತಹ ಮಾಹಿತಿ ಕಾರ್ಯಾಗಾರಗಳು ಉಪಯುಕ್ತವಾಗಿವೆ,ಸ್ಪರ್ಧಾತ್ಮಕತೆಗೆ ಅನುಗುಣವಾಗಿ ಹೆಜ್ಜೆ ಹಾಕಿ ಎಂದರು.ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಜನತಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಯ ಅಧ್ಯಕ್ಷರು ಹಾಗೂ ಜನತಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಗಣೇಶ ಮೊಗವೀರರವರು ಮಾತನಾಡಿ ಪದವಿಪೂರ್ವ ಶಿಕ್ಷಣ ಪರಿಪೂರ್ಣವಾಗಬೇಕಾದರೆ ಜ್ಞಾನಾತ್ಮಕವಾದ ಎಲ್ಲಾ ವಿಚಾರಗಳನ್ನು ಸ್ವೀಕರಿಸಿ ಅದರಂತೆ ಕಾಲೇಜಿನಲ್ಲಿ ವಿನೂತನ ಯೋಜನೆಗಳನ್ನು ಆಯೋಜಿಸಿದ್ದೇವೆ ಅವುಗಳ ಬಳಕೆ ನಿಮ್ಮದಾಗಲಿ ಎಂದರು‌.
ಬ್ಯಾಂಕಿಂಗ್ ಕುರಿತು ಮಾಹಿತಿಯ ನೀಡಿದ ಕರ್ನಾಟಕ ಬ್ಯಾಂಕ್ ಕುಂದಾಪುರ ಶಾಖೆಯ ಅಧಿಕಾರಿ ಶ್ರೀ ಉದಯ ಹೆಗ್ಡೆಯವರು ಮಾತನಾಡಿ ಬ್ಯಾಂಕಿಂಗ್ ವ್ಯವಹಾರದೊಂದಿಗೆ ಬ್ಯಾಂಕಿಂಗ್ ಉದ್ಯೋಗಕ್ಕೆ ಸಂಬಂಧಿಸಿದ ಸ್ಪರ್ಧಾತ್ಮಕ ಪರೀಕ್ಷೆಯ ಕುರಿತು ಮಾಹಿತಿ ನೀಡಿದರು. ಅಗ್ನಿವೀರ್ ಕುರಿತು ಮಾಹಿತಿ ನೀಡಿದ ನಿವೃತ್ತ
ಲೆಫ್ಟಿನೆಂಟ್ ಕರ್ನಲ್ ಶ್ರೀ ಎಮ್.ಕೆ.ಶೆಟ್ಟಿಯವರು ಮಾತನಾಡಿ ಅಗ್ನಿವೀರ್ ಕುರಿತು ಸಂಪೂರ್ಣವಾಗಿ ಮಾಹಿತಿ ನೀಡಿದರು.ಬಾಲ ನ್ಯಾಯ ಕಾಯ್ದೆಗಳ ಕುರಿತು ಮಾಹಿತಿ ನೀಡಿದ ಮಕ್ಕಳ ರಕ್ಷಣಾ ಘಟಕ ಉಡುಪಿಯ ರಕ್ಷಣಾಧಿಕಾರಿಯಾಗಿರುವ ಶ್ರೀ ಮಹೇಶ ದೇವಾಡಿಗರವರು ಬಾಲ್ಯ ವಿವಾಹ,ಪೋಕ್ಸೋ ಕಾಯ್ದೆಗಳ ಕುರಿತಾಗಿ ಸಂಪೂರ್ಣವಾಗಿ ಮಾಹಿತಿ ನೀಡಿದರು.NATA ಸ್ಪರ್ಧಾತ್ಮಕ ಪರೀಕ್ಷೆಯ ಕುರಿತು ಸಹ-ಸಂಸ್ಥಾಪಕರು ಮತ್ತು ಆಪರೇಷನಲ್ ಹೆಡ್ ಡಿಸೈನ್ ವೆನ್ಯೂ ಶ್ರೀ ಚಂದ್ರಶೇಖರ್ ಬೆಂಗಳೂರು NATA ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವ ಕ್ರಮಗಳ ಕುರಿತು ಮಾಹಿತಿ ನೀಡಿದರು.ಕಾಲೇಜಿನ‌ ಉಪ-ಪ್ರಾಂಶುಪಾಲರಾದ ಶ್ರೀ ರಮೇಶ ಪೂಜಾರಿ, ಬೋಧಕ/ಬೋಧಕೇತರ ವೃಂದದವರು ಉಪಸ್ಥಿತರಿದ್ದರು.ಉಪನ್ಯಾಸಕ ಉದಯ ನಾಯ್ಕ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

   

Related Articles

error: Content is protected !!