152
ತಲ್ಲೂರು: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬೈಂದೂರು ಮತ್ತು ಕ್ಷೇತ್ರ ಸಂಪನ್ಮೂಲ ಕೇಂದ್ರ ಬೈಂದೂರು ಹಾಗೂ ಕರ್ನಾಟಕ ಪಬ್ಲಿಕ್ ಸ್ಕೂಲ್ ವಂಡ್ಸೆ ನೆಂಪು ಇವರ ಸಂಯುಕ್ತ ಆಶ್ರಯದಲ್ಲಿ ನವಂಬರ್ 28ರಂದು ನಡೆದ ಬೈಂದೂರು ತಾಲೂಕು ಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ‘ಆವಿಷ್ಕಾರ ಅಂಗಳ – 2K25’ ಇದರಲ್ಲಿ ಭಾಗವಹಿಸಿದ ಜಯರಾಣಿ ಆಂಗ್ಲ್ ಮಾಧ್ಯಮ ಶಾಲೆಯ ವಿದ್ಯಾರ್ಥಿನಿಯಾದ ಶಾರ್ವಿ 8ನೇ ತರಗತಿ ಮೆಥೆಮೆಟಿಕ್ಸ್ ವರ್ಕಿಂಗ್ ಮಾಡೆಲ್ – ವಾಲ್ಯೂಮ್ ಆಫ್ ಕ್ಯೂಬ್ ಕೀಬೋರ್ಡ್ ಅಂಡ್ ಸಿಲಿಂಡರ್ ರಲ್ಲಿ ತೃತೀಯ ಸ್ಥಾನ ಗಳಿಸಿದ್ದಾಳೆ ವಿದ್ಯಾರ್ಥಿನಿಗೆ ಗಣಿತ ಶಿಕ್ಷಕಿ ಕುಮಾರಿ ಸ್ವಾತಿ ಆಚಾರ್ಯ ಇವರು ಮಾರ್ಗದರ್ಶನವನ್ನು ನೀಡಿರುತ್ತಾರೆ. ಈ ಸಾಧನೆಗೆ ಶಾಲಾ ಮುಖ್ಯ ಶಿಕ್ಷಕಿ ಹಾಗೂ ಶಾಲೆಯ ಬೋಧಕ ಮತ್ತು ಬೋಧಕೇತರ ವೃಂದದವರು ಅಭಿನಂದಿಸಿದ್ದಾರೆ.

