ಕೋಟೇಶ್ವರ : ಶ್ರೀ ಕಾಳಾವರ ವರದರಾಜ ಎಂ. ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕುಂದಾಪುರ ಕೋಟೇಶ್ವರದಲ್ಲಿ ಭಾರತ ಚುನಾವಣಾ ಆಯೋಗ, ಸಾರ್ವತ್ರಿಕ ಲೋಕಸಭಾ 2024 ರ ಅಂಗವಾಗಿ “ಪ್ರಜಾಪ್ರಭುತ್ವ ಮತ್ತು ಗೌರವಾನ್ವಿತ ಮತದಾರ” ಎಂಬ ವಿಷಯದ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಇದರ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಡಾ. ರಾಜೇಂದ್ರ ಎಸ್. ನಾಯಕ ವಹಿಸಿದ್ದು, ಇವರು ವಿದ್ಯಾರ್ಥಿಗಳನ್ನು ಕುರಿತು ಭಾರತ ಪ್ರಜಾ ಪ್ರಭುತ್ವ ಹೊಂದಿರುವ ರಾಷ್ಟ್ರವಾಗಿದೆ. ಇಲ್ಲಿ ನಮಗೆ ಮತದಾನ ಚಲಾಯಿಸುವ ಹಕ್ಕು ಸಿಕ್ಕಿದೆ. ಎಲ್ಲಾ 18 ವರ್ಷ ಮೇಲ್ಪಟ್ಟಂತಹ ವಿದ್ಯಾರ್ಥಿಗಳು ಮತ ಚಲಾಯಿಸಿ, ದೇಶವನ್ನು ಅಭಿವೃದ್ಧಿ ಪಡಿಸಿ ಮತ್ತು ನಮ್ಮ ಮತ ಮಾರಾಟಕ್ಕಿಲ್ಲ ನಾವೆಲ್ಲರೂ ಖಂಡಿತವಾಗಿ ಮತವನ್ನು ಚಲಾಯಿಸುತ್ತೇವೆ ಎಂದು ಪ್ರತಿಜ್ಞೆ ಮಾಡಿ, ಮತದಾನ ಮಾಡಿ ಎಂದು ಹಿತ ವಚನ ನುಡಿದರು.
ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಶ್ರೀ ಸುರೇಶ ಮತ್ತು ಶ್ರೀಮತಿ ಕೃಪಾ ಎಂ.ಎಂ., ಸಂಚಾಲಕರು, ನಮ್ಮ ಭೂಮಿ ಫೌಂಡೇಶನ್, ಕುಂದಾಪುರ ಇವರು ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಶ್ನೆಗಳನ್ನು ಕೇಳುವುದರ ಮೂಲಕ ಮತದಾನದ ಪ್ರಾಮುಖ್ಯತೆಯ ಬಗ್ಗೆ ವಿವರಿಸಿದರು. ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಶ್ರೀ ರಾಮರಾಯ ಆಚಾರ್ಯ ಉಪಸ್ಥಿತರಿದ್ದರು.
ಡಾ. ಭಾಗೀರಥಿ ನಾಯ್ಕ, ಸಂಚಾಲಕರು ಚುನಾವಣಾ ಸಾಕ್ಷರತಾ ಸಂಘ ಇವರು ಎಲ್ಲರನ್ನು ಸ್ವಾಗತಿಸಿದರು. ತಿಲಕರವರು ವಂದಿಸಿದರು. ಸ್ವರೂಪ ಪ್ರಾರ್ಥನೆ ಮಾಡಿ, ರಕ್ಷಿತಾ ಇವರು ನಿರೂಪಣೆ ಮಾಡಿದರು. ಹಾಗೂ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಕ್ರೀಯಾಶೀಲರಾಗಿ ಭಾಗವಹಿಸಿದರು.