Home » ಪರಿಸರ ಸ್ನೇಹಿ ವರ್ತನೆ ನಮ್ಮ ಆದ್ಯತೆಯಾಗಲಿ : ಗಣೇಶ್ ಹೆಬ್ಬಾರ್.
 

ಪರಿಸರ ಸ್ನೇಹಿ ವರ್ತನೆ ನಮ್ಮ ಆದ್ಯತೆಯಾಗಲಿ : ಗಣೇಶ್ ಹೆಬ್ಬಾರ್.

by Kundapur Xpress
Spread the love

ಕೋಟೇಶ್ವರ : ಹೊಸ ಪರಿಸರ ಬೆಳೆಸುವುದಕ್ಕಿಂತ ಇರುವ ಪರಿಸರವನ್ನು ಉಳಿಸಿ ಪರಿಸರ ಸ್ನೇಹಿ ವರ್ತನೆ ಬೆಳೆಸಿಕೊಂಡು ಎಲ್ಲರೂ ಬದುಕಿ ಮತ್ತೊಬ್ಬರನ್ನು ಬದುಕಿಸೋಣ.ಶಾಲಾ ಸುತ್ತಲಿನ ಶೈಕ್ಷಣಿಕ ಪರಿಸರ,ಮನೆಯ ಅಂಗಳದ ಕೌಟುಂಬಿಕ ಪರಿಸರ,ಧಾರ್ಮಿಕ,ಸಾಂಸ್ಕೃತಿಕ ಪರಿಸರವನ್ನು ಕಾಪಿಟ್ಟುಕೊಳ್ಳೋಣ.ಸ್ವಚ್ಛ ಸುಂದರ ಪರಿಸರವನ್ನು ಮುಂದಿನ ಪೀಳಿಗೆಗೆ ಬಿಟ್ಟು ಕೊಡೋಣ ಎಂದು ಕೆಪಿಎಸ್ ಕೋಟೇಶ್ವರದ ಉಪನ್ಯಾಸಕ ಗಣೇಶ್ ಹೆಬ್ಬಾರ್ ರವರು ಅಭಿಮತಿಸಿದರು.
ಅವರು ಕೋಟೇಶ್ವರ ಪಬ್ಲಿಕ್ ಸ್ಕೂಲ್ ಪ್ರೌಢ ಶಾಲಾ ವಿಭಾಗದ ಪ್ರಕೃತಿ ಇಕೋ ಕ್ಲಬ್ ಮತ್ತು ಎನ್ ಎಸ್ ಎಸ್ ಘಟಕಗಳ ಆಶ್ರಯದಲ್ಲಿ ಆಯೋಜಿಸಿದ ವಿದ್ಯಾರ್ಥಿಗಳಲ್ಲಿ ಪರಿಸರ ಪ್ರಜ್ಞೆ ಎಂಬ ಕಾರ್ಯಕ್ರಮದಲ್ಲಿ ಮಾಹಿತಿಪೂರ್ಣ ಉಪನ್ಯಾಸ ನೀಡಿ ಮಾತನ್ನಾಡಿದರು.
ಸಂಸ್ಥೆಯ ಉಪಪ್ರಾಂಶುಪಾಲ ಚಂದ್ರಶೇಖರ್ ಶೆಟ್ಟಿರವರು ಅಧ್ಯಕ್ಷತೆ ವಹಿಸಿ ಪರಿಸರದಿಂದ ಮಾನವನೇ ವಿನಃ ಮಾನವನಿಂದ ಪರಿಸರವಲ್ಲ ಎಂಬುದನ್ನು ನಾವು ತಿಳಿದು ಬಾಳಬೇಕಿದೆ ಎಂದು ಪ್ರತಿಪಾದಿಸಿದರು.ಇಕೋ ಕ್ಲಬ್ ನ ಮಾರ್ಗದರ್ಶಿ ಶಿಕ್ಷಕ ಶ್ರೀಕಾಂತ್ ರವರು ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಪರಿಸರ ಪ್ರಜ್ಞೆಯ ಪ್ರತಿಜ್ಞೆಯನ್ನು ಬೋಧಿಸಿದರು. ವೇದಿಕೆಯಲ್ಲಿ ಎಸ್.ಡಿ.ಎಂ.ಸಿ ಸದಸ್ಯರಾದ ರೇಷ್ಮಾ,ಲೀಲಾ, ಆಪ್ತಸಮಾಲೋಚಕ ಶಿಕ್ಷಕಿ ಪೂರ್ಣಿಮಾ ಭಟ್, ಚುನಾವಣಾ ಸಾಕ್ಷರತಾ ಕ್ಲಬ್ ನ ಮಾರ್ಗದರ್ಶಿ ಶಿಕ್ಷಕಿ ನಾಗರತ್ನ. ಎಂ, ಶಿಕ್ಷಕಿಯರಾದ ಅನುರಾಧ,ಸಂಧ್ಯಾರವರು ಉಪಸ್ಥಿತರಿದ್ದರು. ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿ ರಮಾನಂದ ನಾಯಕ್ ಕಾರ್ಯಕ್ರಮ ನಿರ್ವಹಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಉದಯ್ ಮಡಿವಾಳರವರು ಸರ್ವರನ್ನು ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಶಿಕ್ಷಕ ಸಿಬ್ಬಂದಿಗಳು ವಿದ್ಯಾರ್ಥಿಗಳು ಪೋಷಕ ಬಂಧುಗಳು ಉಪಸ್ಥಿತರಿದ್ದರು.

 

Related Articles

error: Content is protected !!