“ಶಿಕ್ಷಕ ವೃತ್ತಿ ಎನ್ನುವುದು ಉಳಿದೆಲ್ಲ ವೃತ್ತಿಗಳಿಗಿಂತ ಭಿನ್ನವಾದುದು ಹಾಗೂ ಪವಿತ್ರವಾದದು. ಈ ವೃತ್ತಿಯೊಂದಿಗೆ ವೃತ್ತಿ ಪ್ರೀತಿ ಮೇಳೈಸಿ ಕೊಂಡಾಗ ಶಿಕ್ಷಕ ದಣಿವರಿಯದೆ, ಉತ್ಸಾಹದಿಂದ ಕ್ರಿಯಾಶೀಲನಾಗಿ ತನ್ನ ಕೆಲಸದಲ್ಲಿ ತಲ್ಲೀನನಾಗಿ ಅನನ್ಯತೆ ಕಂಡುಕೊಂಡು ಶ್ರೇಷ್ಠ ಸಾಧಕನಾಗುತ್ತಾನೆ ಜೊತೆಗೆ ವಿದ್ಯಾರ್ಥಿಗಳ ಬದುಕಿನಲ್ಲಿ ಮಹತ್ವದ ಸ್ಥಾನ ಪಡೆಯುತ್ತಾನೆ. ಅದರೊಂದಿಗೆ ಶಿಕ್ಷಕರ ಬದುಕು ಸಾರ್ಥಕಗೊಳ್ಳುತ್ತದೆ ತನ್ಮೂಲಕ ಗೌರವಕ್ಕೆ ಪಾತ್ರರಾಗುತ್ತಾರೆ”. ಎಂದು ಮುಖ್ಯೋಪಾಧ್ಯಾಯರಾದ ಸುರೇಶ್ ಭಟ್ ರವರು ಹೇಳಿದರು.
ರಾಮ್ ಸನ್ ಸರಕಾರಿ ಪ್ರೌಢಶಾಲೆ ಕಂಡ್ಲೂರು ಇಲ್ಲಿ ಜಿಲ್ಲಾ ಪ್ರಶಸ್ತಿ ಪುರಸ್ಕೃತರಾದ ಶ್ರೀ ಅಜಯ್ ಕುಮಾರ್ ಶೆಟ್ಟಿ ಯವರ ಅಭಿನಂದನಾ ಕಾರ್ಯಕ್ರಮದಲ್ಲಿ, ಅಧ್ಯಕ್ಷತೆ ವಹಿಸಿ, ಅಜಯ್ ಕುಮಾರ್ ಶೆಟ್ಟಿ ಅವರನ್ನು ಸಂಸ್ಥೆಯ ವತಿಯಿಂದ ಅಭಿನಂದಿಸಿ ಅವರು ಮಾತುಗಳನ್ನಾಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶಿಕ್ಷಕರಾದ ಶ್ರೀ ಗೋಪಾಲ್ ವಿಷ್ಣು ಭಟ್, ರಜನಿ ಎಸ್. ಹೆಗಡೆ, ಶ್ರೀಮತಿ ರತ್ನ, ನಿತ್ಯಾನಂದ ಶೆಟ್ಟಿ ಹಳ್ನಾಡು, ಅಣ್ಣಪ್ಪ.ಎಂ ಗೌಡ , ಶ್ರೀಮತಿ ಲಕ್ಷ್ಮಿ. ಎ .ಶೆಟ್ಟಿ , ಸಂಗೀತ, ಕುಮಾರಿ ದಿಶಾ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಎಲ್ಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕುಮಾರಿ ಶ್ವೇತಾ ಸ್ವಾಗತಿಸಿ, ಕುಮಾರಿ ಡಿನಾ ಬುತ್ತೇಲ್ಲೋ ಸನ್ಮಾನ ಪತ್ರ ವಾಚಿಸಿದರು. ಸಹ ಶಿಕ್ಷಕ ಸಂತೋಷ್ ನಿರೂಪಿಸಿ , ಕುಮಾರಿ ಸಿಂಚನಾ ವಂದಿಸಿದರು