ಬಸ್ರೂರು : ಮಾತೃ ಭಾಷಾ ದಿನಾಚರಣೆಯು ಕಾಲೇಜಿನ ಸಭಾಂಗಣದಲ್ಲಿ ಜರುಗಿತು. ಕೋಟ ವಿವೇಕ ಬಾಲಕಿಯರ ಫ್ರೌಢಶಾಲೆಯ ಶಿಕ್ಷಕರಾದ ನರೇಂದ್ರ ಕುಮಾರ್ ಕೋಟ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿ ಮಾನವ ಜೀವನದಲ್ಲಿ ಭಾಷೆ ಪ್ರಮುಖ ಪಾತ್ರ ವಹಿಸುತ್ತದೆ ಎಂದರು. ಭಾಷೆ ಎಲ್ಲರನ್ನು ಒಂದೆಡೆ ಸೇರಿಸುವುದರ ಮೂಲಕ ಜನರು ತಮ್ಮ ಮತ್ತು ಇತರ ಭಾಷೆಗಳ ಬಗ್ಗೆ ಪ್ರೀತಿಯನ್ನು ಬೆಳೆಸಿಕೊಳ್ಳುವುದಲ್ಲದೇ ಎಲ್ಲಾ ಭಾಷೆಯನ್ನು ಕಲಿತು ಅರ್ಥ ಮಾಡಿಕೊಳ್ಳಬೇಕು, ಜೊತೆಗೆ ಭಾಷೆಯ ಮೇಲೆ ಪ್ರೀತಿ ಬರಬೇಕಾದರೆ ಸಣ್ಣ ಸಣ್ಣ ಕವನ ಬರೆಯಬೇಕು. ಇದರಿಂದ ವ್ಯಕ್ತಿತ್ವ ವಿಕಸನದ ಜೊತೆಗೆ ದೃಷ್ಟಿಕೋನ ಬದಲಾಗುತ್ತಾ ಹೋಗುತ್ತದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಚಂದ್ರಾವತಿ ಶೆಟ್ಟಿ ನಿರ್ವಹಿಸಿದರು. ಕಾರ್ಯಕ್ರಮದ ಸಂಯೋಜಕರಾದ ಉಪನ್ಯಾಸಕಿ ವೈಶಾಲಿ ಸ್ವಾಗತಿಸಿದರು. ವಿದ್ಯಾರ್ಥಿನಿ ಸೌಮ್ಯ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿನಿ ಸ್ವಪ್ನ ವಂದಿಸಿದರು.