Home » 22 ವಿದ್ಯಾರ್ಥಿಗಳಿಗೆ 625ಕ್ಕೆ 625 ಅಂಕ
 

22 ವಿದ್ಯಾರ್ಥಿಗಳಿಗೆ 625ಕ್ಕೆ 625 ಅಂಕ

by Kundapur Xpress
Spread the love

ಬೆಂಗಳೂರು : ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಫಲಿತಾಂಶ ಶುಕ್ರವಾರ ಪ್ರಕಟವಾಗಿದ್ದು ಪರೀಕ್ಷೆ ಬರೆದಿದ್ದ 8,42,173 ವಿದ್ಯಾರ್ಥಿಗ ಳಲ್ಲಿ 5,24,984 ಮಕ್ಕಳು ಉತ್ತೀರ್ಣರಾಗುವ ಮೂಲಕ ಶೇ.62.34 ಫಲಿತಾಂಶ ದಾಖಲಾಗಿದೆ. ಈ ಬಾರಿ ಹದಿನೈದು ಹೆಣ್ಣು ಮಕ್ಕಳು ಸೇರಿದಂತೆ 22 ವಿದ್ಯಾರ್ಥಿಗಳು 625ಕ್ಕೆ 625 ಅಂಕ ಪಡೆದು ಸಾಧನೆ ಮಾಡಿದ್ದಾರೆ.

ಕಳೆದ ವರ್ಷ ಶೇ.73.40 ಫಲಿತಾಂಶ ಆಗಿತ್ತು. ಈ ಸಲ ಶೇ.62.34 ಫಲಿತಾಂಶ ಆಗಿದೆ. ಈ ಬಗ್ಗೆ ಫಲಿತಾಂಶ ಬಿಡುಗಡೆ ಮಾಡಿ ಮಾಹಿತಿ ನೀಡಿದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರು, ಕಳೆದವರ್ಷದ ಫಲಿತಾಂಶವನ್ನು ಶೇ.20ರಷ್ಟು ಗ್ರೇಸ್ ಅಂಕದೊಂದಿಗೆ ಉತ್ತಮಗೊಳಿಸಲಾಗಿತ್ತು. ಅಸಲಿ ಫಲಿತಾಂಶ ಶೇ.53 ಅಷ್ಟೇ ಆಗಿತ್ತು. ಈ ಬಾರಿ ಶೇ.20ರಷ್ಟು ಗ್ರೇಸ್ ಅಂಕ ನೀಡಿಲ್ಲ ಶೇ.10ಕ್ಕೆ ಸೀಮಿತಗೊಳಿಸಿದ್ದೇವೆ. ಹಾಗಾಗಿ ಶೇ. 53ರಷ್ಟು ಫಲಿತಾಂಶಕ್ಕೆ ಹೋಲಿಸಿದರೆ ಈ ಬಾರಿಯ ಫಲಿತಾಂಶ ಶೇ.9ರಷ್ಟು ಹೆಚ್ಚಳವಾದಂತಾಗಿದೆ ಎಂದು ಅವರು ಹೇಳಿದರು.

 

Related Articles

error: Content is protected !!