ಕುಂದಾಪುರ :ಸೇವಾ ಸಂಗಮ ವಿದ್ಯಾ ಕೇಂದ್ರ ವಿದ್ಯಾಗಿರಿ ತೆಕ್ಕಟ್ಟೆಯಲ್ಲಿ ಜ್ಞಾನ ವಿಜ್ಞಾನ, ಗಣಿತ, ಸಂಸ್ಕೃತಿ ಜ್ಞಾನ, ಯೋಗ ಮೇಳ ಕಾರ್ಯಕ್ರಮವನ್ನು ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲಾ ಘಟಕ ಸಂಯೋಗದೊಂದಿಗೆ ಆಯೋಜಿಸಲಾಯಿತು. ಈ ಸ್ಪರ್ಧೆಯಲ್ಲಿ ಸೇವಾ ಸಂಗಮ ವಿದ್ಯಾಕೇಂದ್ರ, ತೆಕ್ಕಟ್ಟೆಯ 37 ವಿದ್ಯಾರ್ಥಿಗಳು ವಿಜೇತರಾದರು. ಇದರಲ್ಲಿ ಶಿಶುವರ್ಗದ 17 ವಿದ್ಯಾರ್ಥಿಗಳು, ಬಾಲವರ್ಗದ 15 ವಿದ್ಯಾರ್ಥಿಗಳು ಹಾಗೂ ಯೋಗದಲ್ಲಿ 5 ವಿದ್ಯಾರ್ಥಿಗಳು ವಿಜೇತರಾದರು
ಶಾಲಾ ವಿದ್ಯಾರ್ಥಿಗಳು ಪ್ರಥಮ ಬಹುಮಾನ 20, ದ್ವಿತೀಯ ಬಹುಮಾನ 9, ತೃತೀಯ ಬಹುಮಾನ 7 ಪಡೆದಿರುತ್ತಾರೆ. ಹಾಗೂ ಯೋಗದಲ್ಲಿ ಸಮಗ್ರ ಪ್ರಶಸ್ತಿ ಬಂದಿರುತ್ತದೆ. ಬಾಲವರ್ಗದಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳು ಕಲ್ಬುರ್ಗಿಯಲ್ಲಿ ನಡೆಯುವ ಪ್ರಾಂತ್ಯ ಮಟ್ಟದ ಜ್ಞಾನ ವಿಜ್ಞಾನ ಮೇಳದಲ್ಲಿ ಭಾಗವಹಿಸಲಿದ್ದಾರೆ