Home » ತ್ರಿಶಾ ಕ್ಲಾಸಸ್ : ಸಿಎ ಫೌಂಡೇಶನ್ ದಾಖಲಾತಿ ಆರಂಭ
 

ತ್ರಿಶಾ ಕ್ಲಾಸಸ್ : ಸಿಎ ಫೌಂಡೇಶನ್ ದಾಖಲಾತಿ ಆರಂಭ

by Kundapur Xpress
Spread the love

ಕಟಪಾಡಿ : ಸತತ 27 ವರ್ಷಗಳಿಂದ ಗುಣಮಟ್ಟದ ತರಬೇತಿಯನ್ನು ನೀಡುತ್ತಾ, ವಿದ್ಯಾರ್ಥಿಗಳಲ್ಲಿ ವೃತ್ತಿಪರ ಮನೋಭಾವವನ್ನು ರೂಪಿಸುತ್ತ, ಸಮಾಜಕ್ಕೆ ಉತ್ತಮ ವೃತ್ತಿಪರರನ್ನು ನೀಡುತ್ತಿರುವ ತ್ರಿಶಾ ಸಂಸ್ಥೆ, ತನ್ನ ಶಿಕ್ಷಣ ಕ್ರಮಗಳ ಮೂಲಕ ಅಖಿಲ ಭಾರತ ಮಟ್ಟದಲ್ಲಿ ಸಿಎ ಮತ್ತು ಸಿಎಸ್ ಪರೀಕ್ಷೆಗಳಲ್ಲಿ ಉತ್ತಮ ಫಲಿತಾಂಶಗಳನ್ನು ಗಳಿಸಿ, ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಸ್ಥಾನವನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ.

ಪ್ರಸ್ತುತ ಸಾಲಿನಲ್ಲಿ ಪ್ರಥಮ ಪಿಯುಸಿಯಲ್ಲಿರುವ ವಿದ್ಯಾರ್ಥಿಗಳಿಗೆ ಆನ್‌ಲೈನ್ ಮೂಲಕ ಸಿಎ ಫೌಂಡೇಶನ್ ತರಗತಿಗಳು ಮಾರ್ಚ್ 9 ರಿಂದ ಆರಂಭಗೊಳ್ಳಲಿದ್ದು ಇದರ ದಾಖಲಾತಿ ಪ್ರಾರಂಭವಾಗಿದೆ.

ಪ್ರಯೋಜನಗಳು :

ಪ್ರಥಮ ಪಿಯುಸಿಯಲ್ಲಿರುವ ವಿದ್ಯಾರ್ಥಿಗಳಿಗೆ ಸಿಎ ಫೌಂಡೇಶನ್ ತಯಾರಿ ಮಾಡಲು ಇದು ಅತ್ಯಂತ ಸರಿಯಾದ ಸಮಯವಾಗಿದ್ದು, ದ್ವಿತೀಯ ಪಿಯುಸಿಯ ಪಠ್ಯಕ್ರಮವನ್ನು ಸಿಎ ಫೌಂಡೇಶನ್ ಪಠ್ಯದಲ್ಲಿ ವಿವರವಾಗಿ ಅಭ್ಯಸಿಸಬೇಕಾಗಿರುವುದರಿಂದ ದ್ವಿತೀಯ ಪಿಯುಸಿಯಲ್ಲಿ ಉತ್ತಮ ಅಂಕ ಗಳಿಸಲೂ ಸಹಕಾರಿಯಾಗುತ್ತದೆ. ಅಲ್ಲದೆ ದ್ವಿತೀಯ ಪಿಯುಸಿ ಪರೀಕ್ಷೆ ಉತ್ತೀರ್ಣರಾದ ತತ್ ಕ್ಷಣವೇ ಸಿಎ ಫೌಂಡೇಶನ್ ಪರೀಕ್ಷೆ ಬರೆಯಬಹುದು.

ತರಗತಿಯ ವಿಶೇಷತೆಗಳು :

  • ದೇಶದ ಬೇರೆ ಬೇರೆ ಪ್ರಸಿದ್ಧ ಮತ್ತು ಅನುಭವಿ ವಿಷಯ ತಜ್ಞರಿಂದ ತರಬೇತಿ
  • ವಿದ್ಯಾರ್ಥಿಗಳಿಗೆ ಸ್ಟಡಿ ಮೆಟೀರಿಯಲ್
  • ಪರೀಕ್ಷೆಗೆ ಪೂರಕವಾಗಿ ಪ್ರಶ್ನೆ ಪತ್ರಿಕೆಗಳನ್ನು ಉತ್ತರಿಸುವ ವಿಧಾನಗಳನ್ನು ಹೇಳಿಕೊಡಲಾಗುತ್ತದೆ
  • ಮಾಕ್ ಟೆಸ್ಟ್ ಸರಣಿ ಹಾಗೂ ಎಲ್ಲಾ ವಿಷಯಗಳ ಕುರಿತು ರಿವಿಶನ್ ತರಗತಿಗಳು.

ಆಸಕ್ತರು ಉಡುಪಿಯ ಕೋರ್ಟ್ ಮುಂಭಾಗದಲ್ಲಿರುವ ತ್ರಿಶಾ ಕ್ಲಾಸಸ್ ಕಛೇರಿ ಅಥವಾ ಕಟಪಾಡಿಯ ತ್ರಿಶಾ ವಿದ್ಯಾ ಕಾಲೇಜಿಗೆ ಅಥವಾ ತ್ರಿಶಾ ಕ್ಲಾಸಸ್, ವಿದ್ಯಾರ್ಥಿ ಗ್ರಾಮ, ಗಣೇಶ್ ಬಾಗ್ ಲೇಔಟ್, ಕೊಟ್ಟಾರ, ಮಂಗಳೂರಿಗೆ ಭೇಟಿ ನೀಡಬಹುದು ಎಂದು ಸಂಸ್ಥೆ ಪ್ರಕಟಣೆ ತಿಳಿಸಿದೆ.

 

Related Articles

error: Content is protected !!