Home » ತ್ರಿಶಾ ವಿದ್ಯಾ ಸಂಧ್ಯಾ ಕಾಲೇಜು ವಾರ್ಷಿಕೋತ್ಸವ
 

ತ್ರಿಶಾ ವಿದ್ಯಾ ಸಂಧ್ಯಾ ಕಾಲೇಜು ವಾರ್ಷಿಕೋತ್ಸವ

by Kundapur Xpress
Spread the love

ತ್ರಿಶಾ ವಿದ್ಯಾ ಕಾಲೇಜು ಆಫ್ ಕಾಮರ್ಸ್ ಅಂಡ್ ಮ್ಯಾನೇಜ್ಮೆಂಟ್ ಮತ್ತು ತ್ರಿಶಾ ವಿದ್ಯಾ ಸಂಧ್ಯಾ ಕಾಲೇಜು  ವಾರ್ಷಿಕೋತ್ಸವ ಆಚರಿಸಲಾಯಿತು. ಮುಖ್ಯ ಅತಿಥಿಯಾಗಿ ಮಾತನಾಡಿದ ಯುವ ಉಧ್ಯಮಿ ಹಂಗ್ರೀ ಶಾರ್ಕ್ ಮೀಡಿಯಾ ಸಂಸ್ಥಾಪಕ ಯುದಿಸ್ಟಿರ್ ನಾರಾಯಣ್
ಮಾತನಾಡಿ ವಿದ್ಯಾರ್ಥಿಗಳು ವೃತ್ತಿಪರ ಶಿಕ್ಷಣದ ಕಡೆಗೆ ಹೆಚ್ಚು ಆಸಕ್ತಿ ವಹಿಸುತ್ತಿರುವುದು ತುಂಬಾ ಸಂತಸ ತಂದಿದೆ ಅದರ ಜೊತೆಗೆ ವೈಯಕ್ತಿಕವಾಗಿ ಸ್ವಂತ ಉದ್ಯೋಗವನ್ನು ಸ್ಥಾಪಿಸಿ ಒಂದಷ್ಟು ಜನರಿಗೆ ಉದ್ಯೋಗ ನೀಡುವ ವಿದ್ಯಾರ್ಥಿಗಳಾಗಬೇಕು. ಈ ದೇಶಕ್ಕೆ ನಮ್ಮದಾದ ಕೊಡುಗೆಯನ್ನು ನೀಡುವ ವ್ಯಕ್ತಿಗಳಾಗಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ತ್ರಿಶಾ ಸಮೂಹ ಸಂಸ್ಥೆಗಳ ಸಂಸ್ಥಾಪಕ ಸಿ.ಎ ಗೋಪಾಲಕೃಷ್ಣ ಭಟ್ ಮಾತನಾಡಿ ವಿದ್ಯಾರ್ಥಿಗಳು ತಮ್ಮಲ್ಲಿರುವ ಸುಪ್ತ ಪ್ರತಿಭೆಗಳನ್ನು ಪ್ರದರ್ಶಿಸಲು ಇಂತಹ ವೇದಿಕೆಗಳನ್ನ ಬಳಸಿಕೊಳ್ಳಬೇಕು ವಿದ್ಯಾರ್ಥಿಗಳ ಹೊಸ ಆಲೋಚನೆಗಳಿಗೆ ವಿಭಿನ್ನವಾದ ನಿಲುವುಗಳಿಗೆ ಸಂಸ್ಥೆ ಸದಾ ಬೆನ್ನೆಲುಬಾಗಿ ನಿಂತಿರುತ್ತದೆ  ಎಂದರು.  ತ್ರಿಶಾ ವಿದ್ಯಾ ಕಾಲೇಜ್ ಆಫ್ ಕಾಮರ್ಸ್ ಅಂಡ್ ಮ್ಯಾನೇಜ್ಮೆಂಟ್ ನ ಪ್ರಾಂಶುಪಾಲ ಪ್ರೊ ವಿಘ್ನೇಶ್ ಶೆಣೈ ವಾರ್ಷಿಕ ವರದಿ ವಾಚಿಸಿದರು. ಕಾಲೇಜಿನ‌ ವಾರ್ಷಿಕ ಪತ್ರಿಕೆ ಅಂಕುರ ಬಿಡುಗಡೆ ಮಾಡಲಾಯಿತು ಸಿದ್ಧಾಂತ್  ಫೌಂಡೇಶನ್ ಟ್ರಸ್ಟಿ, ನಮಿತಾ ಜಿ ಭಟ್ ,ತ್ರಿಶಾ ವಿದ್ಯಾ ಸಂಧ್ಯಾ ಕಾಲೇಜಿನ ಪ್ರಾಂಶುಪಾಲ ಡಾ. ಕುಲದೀಪ್ ಯು ವೈ, ವಿದ್ಯಾರ್ಥಿ ನಾಯಕ ನಂದೀಶ್ ಉಪಸ್ಥಿತರಿದ್ದರು. ಪ್ರತಿಭಾ ಪುರಸ್ಕಾರದ ಪಟ್ಟಿಯನ್ನು ಚೇತನ ಸುನಿಲ್, ತ್ರಿಶಾ ಕ್ಲಾಸ್ ನ ವರದಿ ವಾರ್ಷಿಕ ವರದಿಯನ್ನು ಗೌರಿ ಕಾಮತ್ ವಾಚಿಸಿದರು. ಕ್ರೀಡಾ ಕ್ಷೇತ್ರದ ಬಹುಮಾನಗಳ ಪಟ್ಟಿಯನ್ನು ಶಶಿಕಿರಣ್ ವಾಚಿಸಿದರು. ಗಣಕಶಾಸ್ತ್ರ ವಿಭಾಗದ ಮುಖ್ಯಸ್ಥೆ ದಿವ್ಯಶ್ರೀ ಸ್ವಾಗತಿಸಿ ಪ್ರಾಂಶುಪಾಲ ಡಾ. ಕುಲದೀಪ್ ವಂದಿಸಿದರು. ಈ ಕಾರ್ಯಕ್ರಮದಲ್ಲಿ  ಅಂತಿಮ ವರ್ಷದಲ್ಲಿ  ಉತ್ತಮ ಅಂಕ ಗಳಿಸಿದ ಹಿರಿಯ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು ಪ್ರಾಧ್ಯಾಪಿಕೆ ಶಿಲ್ಪಾ ಪ್ರಶಾಂತ್, ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ವಿವಿಧ ಸಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

 

Related Articles

error: Content is protected !!