Home » ಮಾದಕ ವಸ್ತು ಪಿಡುಗು ನಿವಾರಣೆಗೆ ಕೈಜೋಡಿಸಿ
 

ಮಾದಕ ವಸ್ತು ಪಿಡುಗು ನಿವಾರಣೆಗೆ ಕೈಜೋಡಿಸಿ

ಎಸ್ಪಿ ಹರಿರಾಮ್‌ ಶಂಕರ್

by Kundapur Xpress
Spread the love

ಕುಂದಾಪುರ‌ : ಯುವ ಸಮುದಾಯಕ್ಕೆ ಕಂಠಕಪ್ರಾಯವೆನಿಸಿರುವ ಮಾದಕ ವಸ್ತು ಪಿಡುಗಿನ ನಿವಾರಣೆಗೆ ಪ್ರತಿಯೊಬ್ಬರು ಕೈಜೋಡಿಸಬೇಕು. ವಿದ್ಯಾರ್ಥಿ ಸಮುದಾಯ ಇದರ ವಿರುದ್ಧ ಹೋರಾಟ ನಡೆಸಬೇಕು. ಮಾದಕ ವ್ಯಸನದಿಂದ ತೊಂದರೆಯಾಗುತ್ತಿದ್ದರೆ ನಮಗೆ ಮಾಹಿತಿ ನೀಡಿ. ಮಾಹಿತಿದಾರರ ವಿವರ ಗೌಪ್ಯ ಇಡಲಾಗುತ್ತದೆ. ಪೊಲೀಸರನ್ನು ಸ್ನೇಹಿತರಂತೆ ಪರಿಗಣಿಸಿ. ವಿದ್ಯಾರ್ಥಿ ಸಮುದಾಯಕ್ಕೆ ಕಿರುಕುಳ ಅಥವಾ ಏನೆ ತೊಂದರೆಯಾದರೂ ಇಲಾಖೆಯನ್ನು ನೇರವಾಗಿ ಸಂಪರ್ಕಿಸಿ ಎಂದು ಉಡುಪಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಾದ ಹರಿರಾಮ್‌ ಶಂಕರ್‌ ನುಡಿದರು

ಯಡ್ಯಾಡಿ- ಮತ್ಯಾಡಿ ಸುಜ್ಞಾನ – ಪದವಿ ಪೂರ್ವ ಕಾಲೇಜು ಹಾಗೂ ವಿದ್ಯಾರಣ್ಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜರುಗಿದ ವಿದ್ಯಾರ್ಥಿ ಸಂಸತ್ ಪದಗ್ರಹಣ ಹಾಗೂ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ರಾಷ್ಟಕ್ಕೆ ಮಾದರಿಯಾಗಿರುವ ದಿವಂಗತ ಮಧುಕರ ಶೆಟ್ಟಿಯವರ ನೆಲವಾಗಿರುವ ಉಡುಪಿ ಜಿಲ್ಲೆಯಲ್ಲಿ ಮತ್ತೆ ಸೇವೆ ಸಲ್ಲಿಸುವ ಅವಕಾಶ ದೊರಕಿರುವುದು ನನ್ನ ಸೌಭಾಗ್ಯ ಅವರ ಪರಿಸರದಲ್ಲಿರುವ ತವರುನೆಲದ ವಿದ್ಯಾಲಯದ ಮಕ್ಕಳಿಗೆ ಮಧುಕರ ಶೆಟ್ಟಿ ಸ್ಫೂರ್ತಿ, ಪ್ರೇರಣೆಯಾಗಿದ್ದಾರೆ ವಿದ್ಯಾರ್ಥಿ ಸಂಸತ್ ಮಕ್ಕಳಲ್ಲಿ ನಾಯಕತ್ವ ಬೆಳೆಸುತ್ತದೆ ಎಂದರು.

ವಿದ್ಯಾರ್ಥಿ ನಾಯಕಿ ಪ್ರಕೃತಿ ಪಿ.ಶೆಟ್ಟಿ ಸುಜ್ಞಾನ ಮತ್ತು ಪದಾಧಿಕಾರಿಗಳಿಗೆ ಪದಪ್ರದಾನ ನೆರವೇರಿಸಿದರು ಸುಜ್ಞಾನ ಎಜುಕೇಶನಲ್ ಟ್ರಸ್ಟ್ ಅಧ್ಯಕ್ಷ ಡಾ. ರಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸುಜ್ಞಾನ ಎಜುಕೇಶನಲ್ ಟ್ರಸ್ಟ್‌ನ ಕಾರ್ಯದರ್ಶಿ ಪ್ರತಾಪಚಂದ್ರ ಶೆಟ್ಟಿ. ಸುಜ್ಞಾನ ಪಿಯು ಕಾಲೇಜು ಪ್ರಿನ್ಸಿಪಾಲ್ ರಂಜನ್ ಶೆಟ್ಟಿ ವಿದ್ಯಾರಣ್ಯ ಆಂಗ್ಲ ಮಾಧ್ಯಮ ಶಾಲೆಯ ಪ್ರಿನ್ಸಿಪಾಲ್ ಪ್ರದೀಪ್ ಉಪಸ್ಥಿತರಿದ್ದರು.

ಸುಜ್ಞಾನ ಎಜುಕೇಶನಲ್ ಟ್ರಸ್ಟ್‌ನ ಖಜಾಂಚಿ ಭರತ್‌ ಶೆಟ್ಟಿ ಸ್ವಾಗತಿಸಿದರು. ವಿನಯ್ ಕಾರ್ಯಕ್ರಮ ನಿರ್ವಹಿಸಿದರು 

 

Related Articles

error: Content is protected !!