Home » ಕೆ ಸಿಇಟಿ ಫಲಿತಾಂಶದಲ್ಲಿ ಹೆಮ್ಮಾಡಿ ಜನತಾ ಪಿಯು ಕಾಲೇಜಿಗೆ ರಾಜ್ಯ ಮಟ್ಟದ 52 ನೇ ರ‍್ಯಾಂಕ್‌
 

ಕೆ ಸಿಇಟಿ ಫಲಿತಾಂಶದಲ್ಲಿ ಹೆಮ್ಮಾಡಿ ಜನತಾ ಪಿಯು ಕಾಲೇಜಿಗೆ ರಾಜ್ಯ ಮಟ್ಟದ 52 ನೇ ರ‍್ಯಾಂಕ್‌

ಶ್ರೇಯಸ್ ಪಿ ಗಾಣಿಗ ಇಂಜಿನಿಯರಿಂಗ್ ವಿಭಾಗದಲ್ಲಿ 769 ರ‍್ಯಾಂಕ್‌ ಪಡೆದು ವಿಶೇಷ ಸಾಧನೆ : ಒಂದು ಸಾವಿರದ ಒಳಗೆ 10 ರ‍್ಯಾಂಕ್‌ ಗಳು

by Kundapur Xpress
Spread the love

ಹೆಮ್ಮಾಡಿ : ಇಂಜಿನಿಯರಿಂಗ್ ಹಾಗೂ ಇತರ ವೃತ್ತಿಪರ ಕೋರ್ಸ್ ಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಪ್ರವೇಶ ಪರೀಕ್ಷೆಯ ಫಲಿತಾಂಶದಲ್ಲಿ ಗ್ರಾಮೀಣ ಭಾಗದ ಪ್ರತಿಷ್ಟಿತ ಹೆಮ್ಮಾಡಿಯ ಜನತಾ ಪಿಯು ಕಾಲೇಜಿನ ವಿದ್ಯಾರ್ಥಿಗಳು ಅದ್ವಿತೀಯ ಸಾಧನೆ ಮಾಡಿರುತ್ತಾರೆ.ಕಾಲೇಜಿನ ವಿದ್ಯಾರ್ಥಿ ಶ್ರಾವ್ಯ ದೇವಾಡಿಗ ರಾಜ್ಯ ಮಟ್ಟದಲ್ಲಿ 52ನೇ ರ‍್ಯಾಂಕ್‌ ಪಡೆದು ಗ್ರಾಮೀಣ ಭಾಗದಲ್ಲೇ ಹೊಸ ಸಂಚಲನ ಮೂಡಿಸಿದ್ದಾಳೆ. ಈಕೆ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಯಲ್ಲೂ ರಾಜ್ಯ ಮಟ್ಟದ ಮೂರನೇ ರ‍್ಯಾಂಕ್‌ ಪಡೆದಿರುತ್ತಾಳೆ.ಕಾಲೇಜಿನ 10 ವಿದ್ಯಾರ್ಥಿಗಳು ಸಾವಿರದ ಒಳಗೆ ರ‍್ಯಾಂಕ್‌ ಪಡೆದು ಅಮೋಘ ಸಾಧನೆ ಮೆರೆದಿದ್ದಾರೆ.
ವಿದ್ಯಾರ್ಥಿಗಳಾದ ದೀಕ್ಷಾ 98ನೇ ರ‍್ಯಾಂಕ್‌, ಶ್ರೇಯಸ್ ಪಿ ಗಾಣಿಗ 137, ಮರಿಯಾ ವಿಯೋಲಾ 392 ನೇ ರ‍್ಯಾಂಕ್‌,ಗಗನ್ 415ನೇ ರ‍್ಯಾಂಕ್‌,ಸ್ಮೃತಿಕಾ 741ನೇ ರ‍್ಯಾಂಕ್‌,ನೇ ರ‍್ಯಾಂಕ್‌ ,ಶ್ರದ್ದಾ ಎಸ್ ಮೊಗವೀರ 774 ನೇ ರ‍್ಯಾಂಕ್‌,ಸಹನ್ಯ 776 ನೇ ರ‍್ಯಾಂಕ್‌,ಸಾಕ್ಷಿ ಎಸ್ ಪೂಜಾರಿ 858 ನೇ ರ‍್ಯಾಂಕ್‌ ,ಇಂಚರಾ ಅಶೋಕ್ 952 ನೇ ರ‍್ಯಾಂಕ್‌,
ಅಕ್ಷತಾ ವೀರಣ್ಣ 1144 ರ‍್ಯಾಂಕ್‌ ,ಹೇಮಂತ್ ಗಣೇಶ್ ಸಿ. ವಿ, 1203 ರ‍್ಯಾಂಕ್‌,ಪ್ರೀತಿಕಾ 1505 ರ‍್ಯಾಂಕ್‌. ಆಯುಷ್ 2903ನೇ ರ‍್ಯಾಂಕ್‌ , ,ಮಾನ್ಯ ಪೂಜಾರಿ 4508 ನೇ ರ‍್ಯಾಂಕ್‌,ಪ್ರಸಾದ್ ಪೂಜಾರಿ 5262 ನೇ ರ‍್ಯಾಂಕ್‌, ದೀಕ್ಷಾ 5592ರ‍್ಯಾಂಕ್‌ ಪಡೆದಿರುತ್ತಾರೆ.
ಇಂಜಿನಿಯರಿಂಗ್ ವಿಭಾಗದಲ್ಲಿ ಶ್ರೇಯಸ್ ಪಿ ಗಾಣಿಗ 769 ನೇ ರ‍್ಯಾಂಕ್‌,ಅಕ್ಷತಾ ವೀರಣ್ಣ 1144 ರ‍್ಯಾಂಕ್‌,ಹೇಮಂತ್ ಗಾಣಿಗ 1203 ರ‍್ಯಾಂಕ್‌ ಪಡೆಯುದರ ಮೂಲಕ ಅದ್ವಿತೀಯ ಸಾಧನೆ ಮಾಡಿ ರಾಜ್ಯದ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಪ್ರವೇಶಾತಿಯನ್ನು ಪಡೆಯಲು ಅರ್ಹರಾಗಿರುತ್ತಾರೆ.

ಗುಣಮಟ್ಟದ ಶಿಕ್ಷಣಕ್ಕೆ ಹೆಸರಾದ ಜನತಾ ವಿದ್ಯಾಸಂಸ್ಥೆ ವಿದ್ಯಾರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅತ್ಯುತ್ತಮ
ರೀತಿಯಲ್ಲಿ ತರಬೇತುಗೊಳಿಸಿ ಕ ರಾಜ್ಯಮಟ್ಟದಲ್ಲಿ ಉತ್ತಮ ಫಲಿತಾಂಶವನ್ನು ದಾಖಲಿಸಿದೆ.
ವಿದ್ಯಾರ್ಥಿಗಳ ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ,ಬೋಧಕೇತರ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.

 

Related Articles

error: Content is protected !!