ತೆಕ್ಕಟ್ಟೆ : ಶ್ರೀ ಸಿದ್ಧಿವಿನಾಯಕ ದೇವಸ್ಥಾನ ಹಟ್ಟಿಯಂಗಡಿ ಹಾಗೂ ಶಾಲೆಯವರು ಗಣೇಶ ಚತುರ್ಥಿಯ ಅಂಗವಾಗಿ ನಡೆಸಿದ ತಾಲೂಕು ಮಟ್ಟದ ಸಾಂಸ್ಕ್ರತಿಕ ಹಾಗೂ ಕ್ರೀಡಾ ಸ್ಪರ್ಧೆಗಳಲ್ಲಿ ವಿಶ್ವ ವಿನಾಯಕ ಸಿ.ಬಿ.ಎಸ್.ಇ ಸ್ಕೂಲ್‍ನ ಒಟ್ಟು 25 ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾಗಿ ಬಹುಮಾನಗಳನ್ನು ಪಡೆದು ಶಾಲೆಗೆ ಕೀರ್ತಿಯನ್ನು ತಂದಿರುತ್ತಾರೆ. ವಿಜೇತ ವಿದ್ಯಾರ್ಥಿಗಳ ವಿವರ :
ಜೂನಿಯರ್ ವಿಭಾಗ, ಭಾವಗೀತೆ – ಸುಮೇದಾ, ದ್ವಿತೀಯ ಸ್ಥಾನ, ಇಂಗ್ಲೀಷ್ ಭಾಷಣ – ಸ್ಪರ್ಶ, ಪ್ರಥಮ ಸ್ಥಾನ, ಅವನಿ, ತೃತೀಯ ಸ್ಥಾನ, ಏಕಪಾತ್ರಾಭಿನಯ – ಶ್ಲಾಘಾ ಸಾಲಿಗ್ರಾಮ , ದ್ವಿತೀಯ ಸ್ಥಾನ, ರಮಿತ್, ತೃತೀಯ ಸ್ಥಾನ, ಕುಂದಾಪುರ ಕನ್ನಡ ಭಾಷಣ – ಹನಿ ಪ್ರಥಮ ಸ್ಥಾನ,
ಸೀನಿಯರ್ ವಿಭಾಗ, ಕುಣಿತ ಭಜನೆ- ದೀಪ್ತಿ, ಶಿವಾನಿ, ಆರುಷಿ, ವಾರಿದಿ, ಅಮೂಲ್ಯ, ಪ್ರಾರ್ಥನಾ , ದ್ವಿತೀಯ ಸ್ಥಾನ, ಕನ್ನಡ ಉತ್ತಲೇಖನ – ಹಂಸವಿ, ದ್ವಿತೀಯ ಸ್ಥಾನ, ಏಕಪಾತ್ರಾಭಿನಯ – ವರ್ಷಿತ್, ತೃತೀಯ ಸ್ಥಾನ, ರಸ ಪ್ರಶ್ನೆ – ಪ್ರಥಮ್ ಕಾಂಚನ್, ದ್ವಿತೀಯ ಸ್ಥಾನ
ಕ್ರೀಡಾ ವಿಭಾಗ: ಯೋಗ – ಮನೀಷ್, ಅವನಿ, ತೃತೀಯ ಸ್ಥಾನ, ಚೆಸ್ – ಸನತ್, ತೃತೀಯ ಸ್ಥಾನ, ಗೋಣಿಚೀಲ ಓಟ- ಅಮೂಲ್ಯ, ಪ್ರಥಮ ಸ್ಥಾನ, ಲಗೋರಿ – ಆರುಷ್, ಶ್ರೀಶಾ ಮತ್ತು ಸತ್ಯನಾರಾಯಣ ದ್ವಿತೀಯ ಸ್ಥಾನ, ರೂಬಿಕ್ಸ್ ಕ್ಯೂಬ್ – ಸ್ನೇಹಾ, ದ್ವಿತೀಯ ಸ್ಥಾನ, ಚನ್ನೆಮಣೆ – ರಿಷಾ, ದ್ವಿತೀಯ ಸ್ಥಾನ ಹಾಗೂ ಸಮೀಕ್ಷಾ , ತೃತೀಯ ಸ್ಥಾನ ಗಳಿಸಿರುತ್ತಾರೆ.
ವಿಜೇತ ವಿದ್ಯಾರ್ಥಿಗಳಿಗೆ ಶಾಲಾ ಮ್ಯಾನೇಜಿಂಗ್ ಡೈರೆಕ್ಟರ್ ಎಮ್. ಪ್ರಭಾಕರ ಶೆಟ್ಟಿಯವರು ಬಹುಮಾನಗಳನ್ನು ವಿತರಿಸಿ ಅಭಿನಂದಿಸಿದರು, ಕಾರ್ಯಕ್ರಮದಲ್ಲಿ ಶಾಲಾ ಪ್ರಾಂಶುಪಾಲ ನಿತಿನ್ ಡಿ ಆಲ್ಮೇಡಾ, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಶಾಲಾ ಸಿಬ್ಬಂದಿಯವರು ಉಪಸ್ಥಿತರಿದ್ದರು.