ತೆಕ್ಕಟ್ಟೆ: ವಿಶ್ವ ವಿನಾಯಕ ಸಿಬಿಎಸ್‌ಇ ಸ್ಕೂಲ್‌ನಲ್ಲಿ ಲಯನ್ಸ್ ಕ್ವೆಸ್ಟ್ ಇಂಪ್ಲಿಮೆಂಟೇಶನ್ ಕಾರ‍್ಯಕ್ರಮ ನೆರವೇರಿಸಲಾಯಿತು. ಲಯನ್ಸ್ ಜಿಲ್ಲೆ 317C ಜಿಲ್ಲಾ ಗವರ್ನರ್ ಲಯನ್ ಡಾಕ್ಟರ್ ನೇರಿ ಕರ್ನೆಲಿಯೋ ಕಾರ‍್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಮೌಲ್ಯಗಳನ್ನು ಶಾಲಾ ಹಂತದಿಂದಲೇ ಬೆಳೆಸಲು ಶಿಕ್ಷಕರ ಸಹಕಾರ ಅಗತ್ಯ ಎಂದು ತಿಳಿಸಿದರು.
ಕಾರ‍್ಯಕ್ರಮದಲ್ಲಿ ಲಯನ್ಸ್ ಕ್ಲಬ್ ವತಿಯಿಂದ ಶಾಲಾ ಮಕ್ಕಳಿಗೆ ಏರ್ಪಡಿಸಿದ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು. ಶಾಲಾ ವಿದ್ಯಾರ್ಥಿಗಳಿಗೆ ಲಯನ್ಸ್ ಕ್ವೆಸ್ಟ್ ಪುಸ್ತಕಗಳನ್ನು ವಿತರಿಸಲಾಯಿತು. ಕಾರ‍್ಯಕ್ರಮದಲ್ಲಿ ಲಯನ್ಸ್ ಕ್ಲಬ್ ರೀಜನ್ ಚೇರ್ ಪರ್ಸನ್ ಏಕನಾಥ್ ಬೋಳಾರ್, ಲಯನ್ಸ್ ಕ್ಲಬ್ ಕುಂದಾಪುರ ಅಮೃತಧಾರಾ ಘಟಕದ ಅಧ್ಯಕ್ಷರಾದ ಲಯನ್ ಆಶಾ ಶಿವರಾಮ್ ಶೆಟ್ಟಿ, ಲಯನ್ ಕ್ವೆಸ್ಟ್ ಸಂಚಾಲಕರಾದ ಲಯನ್ ಸರಸ್ಪತಿ ಪುತ್ರನ್, ಲಯನ್ಸ್ ಕ್ಲಬ್ ಕುಂದಾಪುರ ಇದರ ಕಾರ್ಯದರ್ಶಿ ಲಯನ್ ದಿನಕರ ಶೆಟ್ಟಿ, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.