Home » ಸಮತ್ವ ದರ್ಶನ
 

ಸಮತ್ವ ದರ್ಶನ

by Kundapur Xpress
Spread the love

ಬದುಕಿನಲ್ಲಿ ನಾವು ಮೇಲು-ಕೀಳು, ಬಡವ-ಶ್ರೀಮಂತ ಎಂದೆಲ್ಲ ಎಷ್ಟೊಂದು ಐಹಿಕ ಬದುಕಿಗೆ ತೀವ್ರವಾಗಿ ಅಂಟಿಕೊಂಡಂತೆ ಮನಸ್ಸು ಅಂಧಕಾರದಲ್ಲಿ ತೊಳಲುವಾಗ ಅಲ್ಲಿ ದೇವರ ಸ್ಮರಣೆಗೂ ಅವಕಾಶವಾಗದು. ಏಕೆಂದರೆ ಸಚ್ಚಿದಾನಂದ ಭೇದಗಳನ್ನು ಕಾಣುತ್ತೇವೆ. ಎಷ್ಟೊಂದು ತಾರತಮ್ಯಗಳನ್ನು ಅನುಸರಿಸುತ್ತೇವೆ ಎಂಬುದನ್ನು ನೋಡಿದರೆ ನಮ್ಮಲ್ಲಿರುವ ದ್ವಂದ್ವಗಳೆಷ್ಟು ಎಂಬ ಅರಿವು ಉಂಟಾಗುತ್ತದೆ. ಆದರೆ ಈ ಅರಿವು ಮೂಡಲು ಪ್ರಾಮಾಣಿಕತೆ ಬೇಕು. ಮನಸ್ಸು ತಿಳಿಯಾದ ನೀರಿನಂತೆ ಪಾರದರ್ಶಕವಾಗಿರಬೇಕು. ಐಹಿಕ ಜಗತ್ತಿಗೆ ನಾವು ಹೆಚ್ಚೆಚ್ಚು ಅಂಟಿಕೊಂಡಂತೆ ಮನಸ್ಸು ಹೆಚ್ಚೆಚ್ಚು ಪ್ರಕ್ಷುಬ್ಧವಾಗುತ್ತದೆ. ಉದ್ವೇಗದಿಂದ ತುಂಬಿಕೊಂಡಿರುತ್ತದೆ. ಅದಕ್ಕೆ ಮುಖ್ಯ ಕಾರಣ ನಾವು ಐಹಿಕ ಸುಖದ ಬೆನ್ನು ಹತ್ತಿರುವುದು. ಮನಸ್ಸನ್ನು ಬಯಕೆಗಳ ಉಗ್ರಾಣ ಮಾಡಿಕೊಂಡಿರುವುದು. ಅಧಿಕಾರ, ಅಂತಸ್ತು, ಐಶ್ವರ್ಯ, ಕೀರ್ತಿಯನ್ನು ಬಯಸುತ್ತಿರುವುದು. ಅದಕ್ಕಾಗಿ ಏನನ್ನು ಮಾಡಲೂ ಸಿದ್ಧರಾಗಿರುವುದು. ಎಷ್ಟು ಕೆಳಮಟ್ಟಕ್ಕೆ ತಲುಪಲೂ ಹೇಸದಿರುವುದು. ಈ ಎಲ್ಲ ಕಾರಣಗಳಿಂದ ಮನಸ್ಸು ಸದಾ ಉದ್ವಿಗ್ನವಾಗಿರುವುದರಲ್ಲಿ ಆಶ್ಚರ್ಯವೇನಿದೆ? ನಮ್ಮ ಮನಸ್ಸನ್ನು ನಾವು ಈ ರೀತಿ ಅಶಾಂತಿಯ ಮಡುವನ್ನಾಗಿ ಮಾಡಿದಾಗ ಅದು ತಿಳಿಯಾಗಿರಲು ಸಾಧ್ಯವೇ? ಮನಸ್ಸಿನ ಸಮತ್ವವನ್ನು ನಾವು ಈ ರೀತಿ ನಾಶಮಾಡಿಕೊಂಡಾಗ ನಮ್ಮಲ್ಲಿ ತರತಮದ ಭಾವ ತೀವ್ರಗೊಳ್ಳುವುದು ಸಹಜವೇ. ಆದುದರಿಂದಲೇ ಸ್ವಜನಪಕ್ಷಪಾತ, ಭ್ರಷ್ಟಾಚಾರ ಮನಸ್ಸಿನಲ್ಲಿ ತುಂಬಿಕೊಳ್ಳುವುದು, ಅನ್ಯರನ್ನು ಪ್ರೀತಿಸುವ ಬದಲು ಸ್ವಾರ್ಥದ ಪರಾಕಾಷ್ಠೆಯಲ್ಲಿ ದ್ವೇಷ-ಅಸೂಯೆಯನ್ನೇ ಬೆಳೆಸಿಕೊಳ್ಳುವೆವು. ಸ್ವಾರ್ಥಪರರಾಗಿ ಘನ ಪರಮಾತ್ಮನು ದೋಷರಹಿತನಾಗಿ ಸಮಾನ ಭಾವನೆಯುಳ್ಳವನಾಗಿದ್ದಾನೆ. ಆದರೆ ‘ಯಾರ ಮನಸ್ಸು ಸಮತ್ವದ ಭಾವನೆಯಲ್ಲಿ ಸ್ಥಿರಗೊಂಡಿದೆಯೋ ಅವರಿಂದ ಈ ಜೀವಿತಕಾಲದಲ್ಲೇ ಇಡಿಯ ಜಗತ್ತು ಜಯಿಸಲ್ಪಟ್ಟಿದೆ. ಕಾರಣ ಅವರು ಜೀವನ್ಮುಕ್ತರಾಗಿದ್ದಾರೆ. ಆದುದರಿಂದ ಮನಸ್ಸಿನ ಸಮತ್ವವನ್ನು ಸಾಧಿಸಿರುವ ಆ ಆತ್ಮಜ್ಞಾನಿಯು ಪರಮಾತ್ಮನಲ್ಲೇ ಸ್ಥಿರವಾಗಿದ್ದಾನೆ’ ಎಂದು ಗೀತೆಯು ಹೇಳುವಲ್ಲಿ ಮನಸ್ಸಿನ ಸಮತ್ವದ ದರ್ಶನ ಸ್ಪಷ್ಟವಾಗುತ್ತದೆ

   

Related Articles

error: Content is protected !!