ಮಹಾತ್ಮಾಗಾಂಧೀಜಿಯವರು ಒಂದೆಡೆ ಹೇಳುತ್ತಾರೆ: ಕೆಟ್ಟದ್ದೆಂದು ತಿಳಿದ ವಸ್ತುವನ್ನೇ ಮಾನವನು ಅಧಿಕವಾಗಿಬಯಸುತ್ತಾನೆ. ನಿಜಕ್ಕೂ ಇದೊಂದು ವಿಪರ್ಯಾಸವೇ ಸರಿ ಆದುದರಿಂದಲೇ ನಮ್ಮ ಮನಸ್ಸಿಗೆ ಯಾವುದರಿಂದಸುಖ, ಶಾಂತಿ, ನೆಮ್ಮದಿ ಸಿಗುತ್ತದೆ ಎಂಬುದನ್ನು ನಾವು ಸೂಕ್ಷ್ಮವಾಗಿ ತಿಳಿಯಬೇಕು. ಚೆನ್ನಾಗಿಉಣ್ಣುವುದರಿಂದ, ತಿನ್ನುವುದರಿಂದ, ಮಜಾ ಉಡಾಯಿಸುವುದರಿಂದ, ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡುವುದರಿಂದ, ಪ್ರವಾಸಸುಖ-ಸೌಕರ್ಯದ ವಸ್ತುಗಳನ್ನು ಕೊಳ್ಳುವುದರಿಂದ, ಧನ-ಕನಕ ಗಳಿಸುವುದರಿಂದ – ಹೀಗೆ ನಾನಾವಿಧಾನಗಳಿಂದ ಪರೀಕ್ಷಿಸಬೇಕು. ಏಕೆಂದರೆ ನಾವು ಸುಖವನ್ನು ಅಪೇಕ್ಷಿಸಿ ಯಾವ ವಸ್ತುವನ್ನುಪಡೆಯುವೆವೋ ಅದರ ಗುಣ-ಸ್ವಭಾವಕ್ಕೆ ತಕ್ಕಂತೆ ನಮಗೆ ಆನಂದವು ಸಿಗುತ್ತದೆ. ಕೆಟ್ಟದ್ದರಿಂದ ಉತ್ತಮಸುಖವನ್ನು ಹೊಂದುವುದು ಸಾಧ್ಯವಿಲ್ಲ. ಆದುದರಿಂದಲೇ ಹೊರಗಿನ ಯಾವತ್ತೂ ಸುಖ-ಸಾಧನಗಳಿಂದ ಸಿಗುವಸಂತೋಷವು ಅದು ಸಿಕ್ಕಿದೊಡನೆಯೇ ಕ್ಷೀಣಿಸುವ ಸೂಚನೆಗಳು ನಮ್ಮ ಮನಸ್ಸಿಗೆ ದೊರಕುತ್ತವೆ. ಹೀಗೆಚಿಂತನೆಯನ್ನು ಸೂಕ್ಷ್ಮಗೊಳಿಸುತ್ತಾ ಹೋದ ಹಾಗೆ ಬಾಹ್ಯ ಜಗತ್ತಿನ ಪ್ರಭಾವಕ್ಕೆ ಗುರಿಯಾಗಿಸುಖವನ್ನು ಅರಸುವುದು ಅರ್ಥಹೀನ ಎನ್ನುವುದು ಕ್ರಮೇಣ ಗೊತ್ತಾಗುತ್ತದೆ. ಮನಸ್ಸಿನ ಸಮತ್ವವನ್ನುಹಿಡಿದಿಟ್ಟುಕೊಂಡು ಸ್ಥಿರತೆಯನ್ನು ಸಾಧಿಸುತ್ತಾ ನಿತ್ಯವೂ ಸ್ವಲ್ಪಹೊತ್ತು ದೇವರ ಧ್ಯಾನದಲ್ಲಿತೊಡಗಬೇಕು. ಬಾಹ್ಯ ಜಗತ್ತನ್ನು ಸಂಪೂರ್ಣವಾಗಿ ಮರೆತು ದೇವರಲ್ಲೇ ಮನಸ್ಸನ್ನು ಕೇಂದ್ರೀಕರಿಸುವ ಈಧ್ಯಾನದಲ್ಲಿ ಮನಸ್ಸು ಗಾಳಿಯಲ್ಲಿ ತೇಲಿದ ಅನುಭವಕ್ಕೆ ಪಕ್ಕಆಗುತ್ತದೆ. ಹೊರ ಜಗತ್ತಿನ ನೂರು ಕೋಟಿಪಾಲು ದೊಡ್ಡ ಜಗತ್ತು ನಮ್ಮ ಒಳಗೇ ಇದೆ ಎನ್ನುವ ವಿವೇಕ ವಾಣಿಯನ್ನು ಸ್ವಾನುಭವದಿಂದ ಅರಿಯಲುಪ್ರಯತ್ನಿಸಬೇಕು. ದೇಹಾತೀತರಾಗುವ ಪ್ರಯತ್ನಕ್ಕೆ ತೊಡಗಬೇಕು. ಆ ಮೂಲಕ ಪ್ರಾಪ್ತವಾಗುವ ಜ್ಞಾನವೇನಿಜವಾದ ಶಕ್ತಿ ರಮಣ ಮಹರ್ಷಿಗಳು ಹೇಳುವಂತೆ ಆತ್ಮಜ್ಞಾನವೇ ಶಕ್ತಿ, ಶಕ್ತಿಯೇ ಜೀವನ. ಅಜ್ಞಾನವೇದೌರ್ಬಲ್ಯ. ದೌರ್ಬಲ್ಯವೇ ಮರಣ