ಹಾಡ್ರಸ್ : ಧಾರ್ಮಿಕಸಭೆಯೊಂದರ ವೇಳೆ ಕಂಡು ಕೇಳರಿಯದ ಕಾಲ್ತುಳಿತ ಸಂಭವಿಸಿ ಸುಮಾರು 120 ಜನ ಸಾವನ್ನಪ್ಪಿ ಹಲವರು ಗಾಯ ಗೊಂಡಿರುವ ಭೀಕರ ಘಟನೆ ಉತ್ತರ ಪ್ರದೇಶದ ಹಾಡ್ರಸ್ ಬಳಿಯ ಪುರ್ರೈ ಎಂಬ ಗ್ರಾಮದಲ್ಲಿ ಮಂಗಳವಾರ ನಡೆದಿದೆ
ಉತ್ತರ ಪ್ರದೇಶದ ಮೂಲದವರಾದ ಭೋಲೆ ಬಾಬಾ ಅಲಿಯಾಸ್ ನಾರಾಯಣ ಸಾಕಾರಹರಿ ಅವರು ‘ಭೋಲೆ ಸತ್ಸಂಗ ಹೆಸರಿನ ಧಾರ್ಮಿಕ ಸಭೆ ಏರ್ಪಡಿಸಿದ್ದರು. ಸಭೆಗೆ ಮಿತಿ ಮೀರಿ ಜನ ಸೇರಿದ್ದರು. ಸಭೆ ಮುಗಿಸಿ ವಾಪಸು ತೆರಳುವಾಗ ಜನರು ಮೋರಿಯೊಂದರ ಮೇಲೆ ನಿರ್ಮಿಸಲಾದ ಕಿರು ಸೇತುವೆ ಮೇಲೆ ಸಾಗಬೇಕಿತ್ತು. ಆಗ ಜನದಟ್ಟಣೆ ಕಾರಣ ನೂಕುನುಗ್ಗಲು ಉಂಟಾಗಿ ಮಕ್ಕಳು, ಮಹಿಳೆಯರು ಸೇರಿ ಅನೇಕ ಜನರು ಒಬ್ಬರ ಮೇಲೊಬ್ಬರು ಬಿದ್ದು ಪ್ರಾಣ ಬಿಟ್ಟರು ಎಂದು ಪ್ರತ್ಯಕ್ಷದ ರ್ಶಿಗಳು ಹಾಗೂ ಅಧಿಕಾರಿಗಳು ಹೇಳಿದ್ದಾರೆ.