Home » ಆಸ್ಥಾ : ಮೊದಲ ಮಹಿಳಾ ಯುದ್ಧ ವಿಮಾನ ಪೈಲಟ್ 
 

ಆಸ್ಥಾ : ಮೊದಲ ಮಹಿಳಾ ಯುದ್ಧ ವಿಮಾನ ಪೈಲಟ್ 

by Kundapur Xpress
Spread the love

ದಿಲ್ಲಿ : ಭಾರತೀಯ ನೌಕಾಪಡೆಯ ಸಮರ ವಿಮಾನಗಳ ಪೈಲಟ್ ತರಬೇತಿಗೆ ಆಯ್ಕೆ ಆಗುವುದರೊಂದಿಗೆ ಸಬ್ ಲೆಫ್ಟಿನೆಂಟ್ ಆಸ್ಥಾ ಪೂನಿಯಾ ಯುದ್ಧ ವಿಮಾನಗಳ ಪ್ರಥಮ ಮಹಿಳಾ ಪೈಲಟ್ ಎಂಬ ಹೆಗ್ಗಳಿಕೆ ಪಾತ್ರರಾಗಲಿದ್ದಾರೆ. ಈ ಮೂಲಕ ನೌಕಾಪಡೆಯಲ್ಲಿ ಮಹಿಳಾ ಫೈಟರ್ ಪೈಲಟ್‌ಗಳ ನವಯುಗ ಆರಂಭವಾಗಲಿದೆ.

ತರಬೇತಿ ನಂತರ ಮುಂದೆ ಲೆಫ್ಟಿನೆಂಟ್ ಆಸ್ಲಾ ಮಿಗ್ -29ಕೆ ಅಥವಾ ರಫೇಲ್ ಫೈಟರ್ ಜೆಟ್‌ನ ನೌಕಾಪಡೆ ಆವೃತ್ತಿ ಹಾರಿಸಲಿದ್ದಾರೆ. ದ್ವಿತೀಯ ಬೇಸಿಕ್ ಹಾಕ್ ಕನ್ವರ್ಶನ್ ಕೋರ್ಸ್‌ನ ಪದವಿ ಪ್ರದಾನ ಸಮಾರಂಭದಲ್ಲಿ ಅಧಿಕಾರಿಗಳು ಈ ನೌಕಾಪಡೆ ವಿಷಯ ಪ್ರಕಟಿಸಿದರು

2013ರಲ್ಲಿ ನಿಯುಕ್ತಿಗೊಂಡ ಹಾಕ್ 132 ಅಡ್ವಾನ್ಸ್ ಡ್ ಜೆಟ್ ಟೈನರ್‌ನಲ್ಲಿ ಭಾರತವು ಮಿಲಿಟರಿ ಪೈಲಟ್‌ಗಳಿಗೆ ತರಬೇತಿ ನೀಡುತ್ತಿದೆ. ಫೈಟರ್ ಪೈಲಟ್ ತರಬೇತಿಗೆ ಲೆಫ್ಟಿನೆಂಟ್ ಪೂನಿಯಾ ಆಯ್ಕೆಯು, ನೌಕಾ ಏವಿಯೇಶನ್ ರಂಗದಲ್ಲಿ ಲಿಂಗ ಸಮಾನತೆ ಅಥವಾ ಸ್ತ್ರೀ ಪುರುಷರ ಸಮಾನ ಒಳಗೊಳ್ಳುವಿಕೆ ನಿಟ್ಟಿನಲ್ಲಿ ನೌಕಾಪಡೆಯ ಬದ್ಧತೆ ಮತ್ತು ನಾರೀಶಕ್ತಿಗೆ ಉತ್ತೇಜನ, ಸಮಾನತೆ ಮತ್ತು ಸದವಕಾಶಗಳ ಸಂಸ್ಕೃತಿ ಯನ್ನು ಪೋಷಿಸುವ ಬದ್ಧತೆಯನ್ನು ಸಾಕ್ಷೀಕರಿಸಿದೆ ಎಂದು ನೌಕಾಪಡೆ ಹೇಳಿಕೆಯಲ್ಲಿ ತಿಳಿಸಿದೆ. 

 

Related Articles

error: Content is protected !!