Home ರಾಷ್ಟ್ರೀಯ ಸುದ್ದಿಅಯೋಧ್ಯೆಗೆ ಸೇನಾ ಮುಖ್ಯಸ್ಥ ಭೇಟಿ: ಬಾಲರಾಮನ ದರ್ಶನ

ಅಯೋಧ್ಯೆಗೆ ಸೇನಾ ಮುಖ್ಯಸ್ಥ ಭೇಟಿ: ಬಾಲರಾಮನ ದರ್ಶನ

by Kundapur Xpress

ಅಯೋಧ್ಯೆ: ಭಾರತೀಯ ಭೂಸೇನೆ ಮುಖ್ಯಸ್ಥರಾದ ಜನರಲ್ ಉಪೇಂದ್ರ ದ್ವಿವೇದಿ ಅವರು ಅಯೋಧ್ಯೆಗೆ ಭೇಟಿ ನೀಡಿ ಬಾಲರಾಮ ಹಾಗೂ ಹನುಮಾನ್ ಘಡಿಯ ಹನುಮಂತನ ದರ್ಶನ ಪಡೆದರು. ಇದು ಅವರ ವೈಯಕ್ತಿಕ ಭೇಟಿಯಾಗಿದ್ದು, ಕುಟುಂಬ ಸಮೇತರಾಗಿ ಆಗಮಿಸಿದ್ದರು. ವಿಶೇಷ ಸೇನಾ ವಿಮಾನದ ಮೂಲಕ ಅಯೋಧ್ಯೆಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಜನರಲ್ ದ್ವಿವೇದಿ ಅವರು, ಅಲ್ಲಿಂದ ನೇರವಾಗಿ ಪ್ರಸಿದ್ದ ಹನುಮನಗಡಿ ದೇವಸ್ಥಾನಕ್ಕೆ ತೆರಳಿ ಸಂಕಟಮೋಚನ ಹನುಮಂತನಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಅನಂತರ ರಾಮನ ದರ್ಶನವನ್ನು ಪಡೆದರು

Related Articles