44
ಬೆಂಗಳೂರು : 2026ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆ (ಯುಜಿಸಿಇಟಿ)ಯ ಫಲಿತಾಂಶವನ್ನು ಜೂ. 6ರಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಪ್ರಕಟಿಸಲಿದೆ.
ವೈದ್ಯಕೀಯ ಶಿಕ್ಷಣ ಸಚಿವ ಮತ್ತು ಕೆಇಎ ಸಹ ಅಧ್ಯಕ್ಷ ಡಾ| ಶರಣ ಪ್ರಕಾಶ ಪಾಟೀಲ್ ಅವರು ಮಧ್ಯಾಹ್ನ 12 ಗಂಟೆಗೆ ಸುದ್ದಿಗೋಷ್ಠಿ ನಡೆಸಿ, ಫಲಿ ತಾಂಶದ ವಿವರಗಳನ್ನು ಪ್ರಕಟಿಸಲಿದ್ದಾರೆ ಎಂದು ಕೆಇಎ ಕಾರನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ತಿಳಿಸಿದ್ದಾರೆ. ಅಭ್ಯರ್ಥಿಗಳು ಫಲಿತಾಂಶಕ್ಕಾಗಿ https://keaonline.karnataka.gov.in/ugcet_2026_results/, https://keaonline.karnataka.gov.in/ugcet_2026_result/,https://cetonline.karnataka.gov.in/kea/ .ಈ ಲಿಂಕ್ ಅನ್ನು ಬಳಸಬಹುದು.

