104
ಹೊಸದಿಲ್ಲಿ: 26/11 ಮುಂಬೈ ಭಯೋತ್ಪಾದಕ ದಾಳಿಗೆ ಸಂಬಂಧಿಸಿದಂತೆ ಸದ್ಯದಲ್ಲೇ ಅಮೆರಿಕದಿಂದ ಹುಸೇನ್ ರಾಣಾ ಗಡಿಪಾರು ಆಗಲಿದ್ದು, ಈತನ ಆಗಮನದಿಂದ ತನಿಖೆಗೆ ಮತ್ತಷ್ಟು ಸಹಾಯವಾಗಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ. ಈತ 2008ರ ದಾಳಿಗೂ ಮುನ್ನ ದೇಶದುದ್ದಗಲಕ್ಕೂ ಸಂಚರಿಸಿದ್ದ ಅದರಲ್ಲೂ ಉತ್ತರ ಮತ್ತು ದಕ್ಷಿಣ ಭಾರತದ ಕೆಲವು ಭಾಗಗಳಿಗೆ ತೆರಳಿ ಪರಿಶೀಲನೆ ನಡೆಸಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈತ ಪಾಕಿಸ್ತಾನದ ಮೂಲದ ಕೆನಡಾ ಪ್ರಜೆಯಾಗಿದ್ದು, ಮುಂಬೈ ದಾಳಿಯ ಪ್ರಮುಖ ಸಂಚುಕೋರರಲ್ಲಿ ಒಬ್ಬನಾದ ಡೇವಿಡ್ ಕೋಲ್ಡನ್ ಹೆಡ್ಲಿಯ ಸಹವರ್ತಿ ಸದ್ಯ ಈತ 14 ವರ್ಷಗಳ ಶಿಕ್ಷೆಯನ್ನು ಪೂರ್ಣ ಮಾಡಿದ್ದು, ಲಾಸ್ ಏಂಜಲೀಸ್‌ನ ಮೆಟ್ರೋಪಾಲಿಟನ್ ಬಂಧನ ಕೇಂದ್ರದಲ್ಲಿ ಮೇಲ್ವಿಚಾರಣೆಯ ಸೆರೆಯಲ್ಲಿದ್ದಾನೆ. ಗುರುವಾರವಷ್ಟೇ ರಾಣಾ ಹಸ್ತಾಂತರದ ಬಗ್ಗೆ ಡೊನಾಲ್ಡ್ ಟ್ರಂಪ್ ಘೋಷಣೆ ಮಾಡಿದ್ದು ಈತನನ್ನು ವಿಶ್ವದ ಅತ್ಯಂತ ದುಷ್ಟರಲ್ಲಿ ಒಬ್ಬ ಎಂದಿದ್ದರು.

