43
ನವದೆಹಲಿ : ಭಾರತದಲ್ಲಿ ನಡೆಸಿದ ಉಗ್ರದಾಳಿಗೆ ಪ್ರತಿಯಾಗಿ ಆಪರೇಷನ್ ಸಿಂದೂರದಿಂದ ಎರಡೆರಡು ಬಾರಿ ಪೆಟ್ಟು ತಿಂದರೂ ಬುದ್ದಿ ಕಲಿಯದ ಪಾಕಿಸ್ತಾನದ ಉಗ್ರರು ಮತ್ತೆ ಭಾರತದ ಒಳಗೆ ನುಸುಳಲು ಯತ್ನಿಸಿದ್ದು, 7 ಉಗ್ರರು ಭಾರತದ ಗಡಿ ಭದ್ರತಾ ಪಡೆ (ಬಿಎಸ್ಎಫ್)ಯ ಯೋಧರ ಗುಂಡಿಗೆ ಬಲಿಯಾಗಿದ್ದಾರೆ
ಜಮ್ಮುವಿನಲ್ಲಿರುವ ಭಾರತ-ಪಾಕ್ ಅಂತಾರಾಷ್ಟ್ರೀಯ ಗಡಿ ನುಸುಳುಲು ಯತ್ನಿಸುತ್ತಿದ್ದ 7 ಉಗ್ರರನ್ನು ಬಿಎಸ್ ಎಫ್ ಯೋಧರು ಹತ್ಯೆ ಮಾಡಿರುವುದಾಗಿ ಗಡಿಭದ್ರತಾ ಪಡೆ ತಿಳಿಸಿದೆ. ಮೃತ ಉಗ್ರರು ಜೈಷ್ ಎ ಮೊಹಮ್ಮದ್ ಸಂಘಟನೆಗೆ ಸೇರಿದವರು ಎನ್ನಲಾಗಿದೆ.
ಜಮ್ಮು ಕಾಶ್ಮೀರದ ಸಾಂಬಾ ಜಿಲ್ಲೆಯಲ್ಲಿ ಕಣ್ಣಾವಲು ವ್ಯವಸ್ಥೆಯಲ್ಲಿ ಉಗ್ರರ ದೊಡ್ಡ ಗುಂಪೊಂದು ಪತ್ತೆಯಾಗಿತ್ತು. ಬಳಿಕ ಅವರು ಗಡಿಯ ಒಳಗೆ ನುಸುಳಲು ಯತ್ನಿಸಿದ್ದು 7 ಉಗ್ರರನ್ನು ಸ್ಥಳದಲ್ಲಿಯೇ ಹತ್ಯೆ ಮಾಡಲಾಗಿದೆ’ ಎಂದು ಬಿಎಸ್‌ಎಫ್ ವಕ್ತಾರರು ಹೇಳಿದ್ದಾರೆ.

