Home » 25,000 ಸಾವಿರ ಕಿಮೀ ಚತುಷ್ಪತ ವಿಸ್ತರಣೆ
 

25,000 ಸಾವಿರ ಕಿಮೀ ಚತುಷ್ಪತ ವಿಸ್ತರಣೆ

by Kundapur Xpress
Spread the love

ಹೊಸದಿಲ್ಲಿ : ದೇಶದಲ್ಲಿನ ಒಟ್ಟು 25,000 ಕಿ.ಮೀ. ದ್ವಿಪಥ ಹೆದ್ದಾರಿಗಳನ್ನು 10 ಲಕ್ಷ ಕೋಟಿ ರೂ.ಗಳ ವೆಚ್ಚದಲ್ಲಿ ನಾಲ್ಕು ಪಥಗಳಾಗಿ ಪರಿವರ್ತಿಸಲಾಗುವುದು ಎಂದು ಕೇಂದ್ರ ಹೆದ್ದಾರಿ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

ಲೋಕಸಭೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, 16,000 ಕಿ.ಮೀ. ರಾಷ್ಟ್ರೀಯ ಹೆದ್ದಾರಿಗಳನ್ನು 6 ಲಕ್ಷ ಕೋಟಿ ರೂ.ಗಳಲ್ಲಿ ಆರು ಪಥಗಳಾಗಿ ಪರಿವರ್ತಿಸಲಾಗುವುದು ಎಂದು ಗಡ್ಕರಿ ಹೇಳಿದರು. ಯೋಜನೆಗಳ ಡಿಪಿಆರ್ (ವಿವರವಾದ ಯೋಜನಾ ವರದಿಗಳು) ಸಿದ್ಧವಾಗುತ್ತಿದ್ದು, ಎರಡು ವರ್ಷಗಳಲ್ಲಿ ಕೆಲಸವನ್ನು ಪೂರ್ಣಗೊಳಿಸುವ ಭರವಸೆ ನಮಗಿದೆ ಎಂದು ಅವರು ಪ್ರಶೋತ್ತರ ವೇಳೆಯಲ್ಲಿ ಹೇಳಿದರು. ಸರ್ಕಾರವು ಈ ಯೋಜನೆಗಳಿಗೆ ಆದ್ಯತೆ ನೀಡುತ್ತಿದ್ದು, ಅವು ಪೂರ್ಣಗೊಂಡ ನಂತರ ರಸ್ತೆ ಅಪಘಾತಗಳ ಸಂಖ್ಯೆ ಗಮನಾರ್ಹವಾಗಿ ಕಡಿಮೆಯಾಗುವ ನಿರೀಕ್ಷೆಯಿದೆ ಎಂದು ಅವರು ತಿಳಿಸಿದರು

 

Related Articles

error: Content is protected !!