ಡಮಾಸ್ಕಸ್ : ಸಿರಿಯಾದಲ್ಲಿ ನಡೆಯುತ್ತಿರುವ ಹಿಂಸಾಚಾರದ ಮಧ್ಯೆ, 75 ಭಾರತೀಯ ಪ್ರಜೆಗಳನ್ನು ದೇಶದಿಂದ ಸ್ಥಳಾಂತರಿಸಲಾಗಿದೆ ಅವರು ಲೆಬನಾನ್ ನಿಂದ ವಿಮಾನದಲ್ಲಿ ಭಾರತಕ್ಕೆ ಮರಳಲಿದ್ದಾರೆ
ಭದ್ರತಾ ಪರಿಸ್ಥಿತಿಯ ಮೌಲ್ಯಮಾಪನ ಮತ್ತು ಸಿರಿಯಾದಲ್ಲಿರುವ ಭಾರತೀಯ ಪ್ರಜೆಗಳ ವಿನಂತಿಗಳ ನಂತರ ಡಮಾಸ್ಕಸ್ ಮತ್ತು ಬೈರುತ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿಗಳು ಈ ಸ್ಥಳಾಂತರಿಸುವಿಕೆಯನ್ನು ಸಮನ್ವಯಗೊಳಿಸಿವೆ. ಸ್ಥಳಾಂತರ ಗೊಂಡವರಲ್ಲಿ ಸೈದಾ ಝನಾಬ್‌ನಲ್ಲಿ ಸಿಲುಕಿದ್ದ ಜಮ್ಮು-ಕಾಶ್ಮೀರದ 44 ಜೈರೀನ್ ಸೇರಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.