Home » ಅಲಸ್ಕಾ ಶೃಂಗಸಭೆ ಬಗ್ಗೆ ಮೋದಿಗೆ ವಿವರಿಸಿದ ಪುಟಿನ್
 

ಅಲಸ್ಕಾ ಶೃಂಗಸಭೆ ಬಗ್ಗೆ ಮೋದಿಗೆ ವಿವರಿಸಿದ ಪುಟಿನ್

by Kundapur Xpress
Spread the love

ಹೊಸದಿಲ್ಲಿ : ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸೋಮವಾರ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕರೆ ಮಾಡಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜತೆ ಅಲಾಸ್ಕಾದಲ್ಲಿ ನಡೆದ ಶೃಂಗಸಭೆಯ ಬಗ್ಗೆ ವಿವರಿಸಿದ್ದಾರೆ. ಮಾತುಕತೆ ಉಕ್ರೇನ್ ಸಂಘರ್ಷ ಮತ್ತು ಭಾರತ-ರಷ್ಯಾ ನಡುವಿನ ದ್ವಿಪಕ್ಷೀಯ ಸಂಬಂಧಗಳ ಮೇಲೆ ಕೇಂದ್ರೀಕೃತವಾಗಿತ್ತು ಎಂದು ಮೂಲಗಳು ತಿಳಿಸಿವೆ.

ಪುಟಿನ್ ಮತ್ತು ಟ್ರಂಪ್, ಉಕ್ರೇನ್ ಸಂಘರ್ಷವನ್ನು ಕೊನೆಗಾಣಿಸುವ ಉದ್ದೇಶದೊಂದಿಗೆ ಅಲಾಸ್ಕಾದಲ್ಲಿ ಶುಕ್ರವಾರ, ಸುಮಾರು ಮೂರು ಗಂಟೆಗಳ ಕಾಲ ಮಾತುಕತೆ ನಡೆಸಿದ್ದರು. ಇದು ಫೆಬ್ರವರಿ 2022ರಲ್ಲಿ ಉಕ್ರೇನ್ ಮೇಲೆ ರಷ್ಯಾದ ಆಕ್ರಮಣದ ನಂತರ ನಡೆದ ಮೊದಲ ಯುಎಸ್-ರಷ್ಯಾ ಶೃಂಗಸಭೆಯಾಗಿತ್ತು. ಬಹುನಿರೀಕ್ಷಿತ ಭೇಟಿ, ಕದನ ವಿರಾಮ ಒಪ್ಪಂದವಿಲ್ಲದೆ ಮುಕ್ತಾಯಗೊಂಡಿತ್ತು.

ಮಾತುಕತೆಯ ವೇಳೆ, ಉಕ್ರೇನ್ ಸಂಘರ್ಷಕ್ಕೆ ಶಾಂತಿಯುತ ಪರಿಹಾರ ಕಂಡುಕೊಳ್ಳುವ ಭಾರತದ ಸ್ಥಿರ ನಿಲುವನ್ನು ಮೋದಿ ಪುನರುಚ್ಚರಿಸಿದ್ದಾರೆ

 

Related Articles

error: Content is protected !!