ನವದೆಹಲಿ : 270ಕ್ಕೂ ಅಧಿಕ ಜನರ ಸಾವಿಗೆ ಕಾರಣವಾಗಿದ್ದ ಅಹಮದಾಬಾದ್ ವಿಮಾನ ದುರಂತದ ಕಾರಣ ಬಯಲಾಗಿದ್ದು ಅಪಘಾತದ ಬಗ್ಗೆ ತನಿಖೆ ನಡೆಸಿದ್ದ ವಿಮಾನ ಅಪಘಾತಗಳ ತನಿಖಾ ಸಂಸ್ಥೆಯು (AAIB) ಬಿಡುಗಡೆಗೊಳಿಸಿದ ವರದಿಯಲ್ಲಿ ಅಚ್ಚರಿಯ ಅಂಶ ಬಯಲಾಗಿದ್ದು ಇಂಜಿನ್ಗೆ ಇಂಧನ ಪೂರೈಕೆ ಕಡಿತದಿಂದಾಗಿ ಅಪಘಾತ ಸಂಭವಿಸಿದೆ ಎಂದು ವರದಿಯಾಗಿದೆ
ವಿಮಾನ ಹಾರಿದ ಕೆಲವೇ ಸೆಕೆಂಡುಗಳಲ್ಲಿ ಎರಡು ಇಂಜಿನ್ಗಳಿಗೆ ಇಂಧನ ಪೂರೈಕೆ ನಿಂತಿದೆ. ಅದರ ಸ್ವಿಚ್ಗಳು RUN ನಿಂದ CUT OFF ಆಗಿದ್ದವು. ಇದರಿಂದ ಇಂಧನ ಸರಬರಾಜಾಗದೆ ವಿಮಾನ ಮೇಲೆಕ್ಕೆ ಹಾರಲು ಸಾಧ್ಯವಾಗಿಲ್ಲ ಎಂದು ತನಿಖಾ ವರದಿಯಲ್ಲಿ ಎಎಐಬಿ ತಿಳಿಸಿದೆ
ವಿಮಾನ ದುರಂತಕ್ಕೀಡಾಗುವ ಮೊದಲು ಪೈಲಟ್ಗಳಿಬ್ಬರು ಮಾತನಾಡಿಕೊಂಡಿದ್ದು, ಬ್ಲ್ಯಾಕ್ಬಾಕ್ಸ್ನಲ್ಲಿ ದಾಖಲಾಗಿದೆ. ಒಬ್ಬ ಪೈಲಟ್ ‘ಇಂಧನವನ್ನು ಏಕೆ ಆಫ್ ಮಾಡಿದ್ದೀರಿ ಎಂದು ಕೇಳುತ್ತಾರೆ. ಅದಕ್ಕೆ ಇನ್ನೊಬ್ಬ ಪೈಲಟ್ ‘ನಾನು ಮಾಡಿಲ್ಲ’ ಎಂದು ಹೇಳುತ್ತಾರೆ. ಇಂಧನ ಸ್ವಿಚ್ಗಳನ್ನು ಮರುಚಾಲನೆ ಮಾಡಿದರೂ, ಅವು ಸಕ್ರಿಯವಾಗಿಲ್ಲ ಎಂದು ತನಿಖಾ ವರದಿ ತಿಳಿಸಿದೆ
ವಿಮಾನ ಟೇಕ್ ಆಫ್ ಆದ 30 ಸೆಕೆಂಡುಗಳ ನಂತರ ಭೀಕರವಾಗಿ ದುರಂತಕ್ಕೀಡಾಗಿದ್ದು ವಿಮಾನ ನಿಲ್ದಾಣದ ಪಕ್ಕದ ಹಾಸ್ಟೆಲ್ ಮೇಲೆ ಅಪ್ಪಳಿಸಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ

