ಚೆನ್ನೈ : ತಮಿಳುನಾಡಿನ ತಿರುಚ್ಚಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸಂಜೆ 5.40ಕ್ಕೆ ಟೇಕಾಫ್ ಆಗಿ ಶಾರ್ಜಾಕ್ಕೆ ಹೊರಟಿದ್ದ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನ ತಾಂತ್ರಿಕ ದೋಷದಿಂದ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಟೇಕಾಫ್ ಆದ ಸ್ವಲ್ಪ ಸಮಯದ ನಂತರ ವಿಮಾನವು ತಾಂತ್ರಿಕ ದೋಷವನ್ನು ಎದುರಿಸಿತು ಮತ್ತು ಇಂಧನವನ್ನು ಸುಡುವ ಮೂಲಕ ವಿಮಾನದ ತೂಕವನ್ನು ಕಡಿಮೆ ಮಾಡಲು ಲ್ಯಾಂಡಿಂಗ್ ಮಾಡುವ ಮೊದಲು ವಿಮಾನ ನಿಲ್ದಾಣದ ಮೇಲೆ ಎರಡೂವರೆ ಗಂಟೆಗಳಿಗೂ ಹೆಚ್ಚು ಕಾಲ ಸುತ್ತಬೇಕಾಯಿತು ನಂತರ ವಿಮಾನವು ಸುರಕ್ಷಿತವಾಗಿ ಲ್ಯಾಂಡ್ ಆಗಿದೆ ಎಂದು ತಿಳಿದು ಬಂದಿದೆ